ಸಂಪೂರ್ಣವಾಗಿ ಲಸಿಕೆ ಪಡೆದು ಕೊಂಡವರಿಗೆ ಮಾಸ್ಕ್ ಬೇಡ, ದೈಹಿಕ ಅಂತರ ಕಾಪಾಡಿಕೊಳ್ಳುವ ಅಗತ್ಯವಿಲ್ಲ! ಅಮೇರಿಕಾದಲ್ಲಿ ಮಹತ್ವದ ತೀರ್ಮಾನ….

Share on facebook
Share on twitter
Share on linkedin
Share on whatsapp
Share on telegram
Share on email
Share on print

ವಾಷಿಂಗ್ಟನ್, ಡಿಸಿ: ಸಂಪೂರ್ಣವಾಗಿ ಕೋವಿಡ್ ಲಸಿಕೆ ಪಡೆದುಕೊಂಡವರು ಮಾಸ್ಕ್ ಧರಿಸುವ ಅಗತ್ಯವಿಲ್ಲವೆಂಬ ತೀರ್ಮಾನವನ್ನು ಅಮೇರಿಕಾ ಕೈಗೊಂಡಿದೆ.

ಸಂಪೂರ್ಣವಾಗಿ ಕೋವಿಡ್ ಲಸಿಕೆ ಪಡೆದುಕೊಂಡವರು ಸಾರ್ವಜನಿಕ ಸ್ಥಳದಲ್ಲಾಗಲೀ, ಒಳಾಂಗಣದಲ್ಲಾಗಲೀ ಮಾಸ್ಕ್ ಧರಿಸಬೇಕಾದ ಅಗತ್ಯವಿಲ್ಲ. ಅದೇ ರೀತಿ ದೈಹಿಕ ಅಂತರವನ್ನೂ ಕಾಪಾಡಿಕೊಳ್ಳಬೇಕಿಲ್ಲ ಎಂಬ ತೀರ್ಮಾನವನ್ನು ಅಮೇರಿಕಾದ ‘ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್’ (CDC) ತೆಗೆದುಕೊಂಡಿದೆ.

ಆದರೆ ಶರೀರದಲ್ಲಿ ರೋಗ ಪ್ರತಿರೋಧ ಶಕ್ತಿ ಕಡಿಮೆಯುಳ್ಳವರು ಮಾಸ್ಕ್ ಧರಿಸುವುದನ್ನು ಮುಂದುವರಿಸಿದರೆ ಉತ್ತಮ ಎಂದೂ ಸಲಹೆ ನೀಡಿದೆ. ಅಂಥವರು ತಮ್ಮ ವೈದ್ಯರ ಸಲಹೆ ಪಡೆದುಕೊಳ್ಳಬೇಕೆಂದು ಸೂಚಿಸಿದೆ. ಅಮೇರಿಕಾ ಅಧ್ಯಕ್ಷ ಜೋ ಬೈಡನ್ ತೀರ್ಮಾನವನ್ನು ಕೋವಿಡ್ ವಿರುದ್ಧದ ಹೋರಾಟದಲ್ಲಿ ಮಹತ್ವಪೂರ್ಣ ಹೆಜ್ಜೆ ಎಂದು ಬಣ್ಣಿಸಿದ್ದಾರೆ.

ಕೋವಿಡ್ ಲಸಿಕೆ ಹೊಂದಿರುವ ತೊಂಭತ್ತು ಪ್ರತಿಶತ ದಕ್ಷತೆ ಮತ್ತು ಎಲ್ಲೆಡೆಯೂ ಅದು ದೊರೆಯುತ್ತಿರುವುದರಿಂದಲೂ ಅಮೇರಿಕಾವು ರೀತಿಯ ತೀರ್ಮಾನಕ್ಕೆ ಬಂದಿದೆ. ಕೋವಿಡ್ ಲಸಿಕೆ ಪಡೆದುಕೊಂಡವರಿಗೆ ಕೋವಿಡ್ ತಗಲುವ ಸಾಧ್ಯತೆ ಕಡಿಮೆಯಿದ್ದು, ಒಂದು ವೇಳೆ ತಗುಲಿದರೂ ಅದು ಇನ್ನೊಬ್ಬರಿಗೆ ಹರಡುವ ಸಾಧ್ಯತೆಯೂ ಕಡಿಮೆ ಎಂದು ‘ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್’ ಹೇಳಿದೆ. ಅಮೇರಿಕಾದಲ್ಲಿ ವರದಿಯಾಗುತ್ತಿರುವ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲೂ ಗಣನೀಯ ಇಳಿಕೆ ಕಂಡು ಬಂದಿದೆ.

ಅಮೇರಿಕಾದಲ್ಲಿ ಹದಿನೆಂಟು ವರ್ಷಕ್ಕಿಂತ ಮೇಲ್ಪಟ್ಟ 58.7% ಮಂದಿ ಒಂದು ಡೋಸ್ ಲಸಿಕೆ ಪಡೆದುಕೊಂಡಿದ್ದರೆ. 45.1% ಮಂದಿ ಸಂಪೂರ್ಣವಾಗಿ ಲಸಿಕೆ ಪಡೆದುಕೊಂಡಿರುತ್ತಾರೆ. ಆಸ್ಪತ್ರೆ, ಬಸ್, ರೈಲು, ವಿಮಾನ ನಿಲ್ದಾಣ ಇತ್ಯಾದಿ ಸಾರ್ವಜನಿಕ ಸಾರಿಗೆಗಳಲ್ಲಿ ಮಾಸ್ಕ್ ಧಾರಣೆ ಮುಂದುವರಿಯಲಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು