ಮುಂಬೈ(26-02-2021): ಗುಜರಾತ್ನ ಸರ್ದಾರ್ ಪಟೇಲ್ ಕ್ರೀಡಾಂಗಣಕ್ಕೆ ‘ನರೇಂದ್ರ ಮೋದಿ ಕ್ರೀಡಾಂಗಣ’ ಎಂದು ಮರುನಾಮಕರಣ ಮಾಡಿರುವುದಕ್ಕೆ ಶಿವಸೇನೆ ‘ಸಾಮ್ನಾ’ದ ಸಂಪಾದಕೀಯದಲ್ಲಿ ಟೀಕಿಸಿದ್ದು, ಜನಮತ ಬೇಜವಾಬ್ದಾರಿ ವರ್ತನೆಗೆ ಸಿಕ್ಕಿದ ಪರವಾನಿಗೆಯಲ್ಲ ಎಂದು ಹೇಳಿದೆ.
ಮೋದಿ ಸರ್ಕಾರಕ್ಕೆ ಕಳೆದ ಚುನಾವಣೆಯಲ್ಲಿ ದೊರೆತ ಅಭೂತಪೂರ್ವ ಬೆಂಬಲವು ಬೇಜವಾಬ್ದಾರಿಯಿಂದ ವರ್ತಿಸಲು ದೊರೆತ ಪರವಾನಗಿಯಲ್ಲ. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಹೆಸರನ್ನು ಇತಿಹಾಸದಿಂದ ಅಳಿಸಲು ಯತ್ನಿಸಲಾಗುತ್ತಿದೆ. ಮೋದಿಯ ಭಕ್ತರು ಮಹಾತ್ಮ ಗಾಂಧಿ, ಸರ್ದಾರ್ ಪಟೇಲ್, ನೆಹರು, ಇಂದಿರಾ ಗಾಂಧಿಗಿಂತಲೂ ಮೋದಿ ದೊಡ್ಡವರೆಂದು ಭಾವಿಸಿದ್ದಾರೆ ಎಂದು ಸಂಪಾದಕೀಯದಲ್ಲಿ ಬರೆಯಲಾಗಿದೆ.
ಮೋದಿಯ ಹೆಸರು ಈಗ ದೊಡ್ಡದಾಗಿದೆ. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಹೆಸರನ್ನು ಇತಿಹಾಸದಿಂದ ಅಳಿಸಿ ಹಾಕಲು ಮೋದಿ ಪ್ರಯತ್ನಿಸಿದ್ದಾರೆ. ಇದು ಅದರ ಮುಂದುವರಿದ ಭಾಗವಾಗಿದೆ ಎಂದು ಉಲ್ಲೇಖಿಸಲಾಗಿದೆ.