ಕೇರಳ(11-10-2020): ಅ.1 ರಂದು ಪೊಲೀಸ್ ಕಸ್ಟಡಿಯಲ್ಲಿದ್ದ 32 ವರ್ಷದ ಸಮೀರ್ ಸಾವಿನ ನಂತರ, ಕೇರಳದ ತ್ರಿಶೂರ್ ಜಿಲ್ಲೆಯ ನಾಲ್ವರು ಜೈಲು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಗಾಂಜಾ ಇದ್ದ ಕಾರಣಕ್ಕೆ ಬಂಧಿಸಲ್ಪಟ್ಟ ಮೃತ ಶಮೀರ್ ಅವರ ಮರಣೋತ್ತರ ವರದಿಯಿಂದ ಆಘಾತಕಾರಿ ವಿವರಗಳು ಹೊರಬಿದ್ದಿದೆ. ಆತನ ತಲೆ, ಎದೆ ಮತ್ತು ಪಕ್ಕೆಲುಬುಗಳಿಗೆ ಮಾರಣಾಂತಿಕ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಶುಕ್ರವಾರ ಬಿಡುಗಡೆಯಾದ ಶವಪರೀಕ್ಷೆಯ ವರದಿಯ ಪ್ರಕಾರ, ಶಮೀರ್ ತಲೆಗೆ ಪೆಟ್ಟಾಗಿ ಸಾವನ್ನಪ್ಪಿದ್ದರು. ಅವರ ಪಕ್ಕೆಲುಬುಗಳು ಮತ್ತು ಎದೆ ಕೂಡ ಬಿರುಕು ಬಿಟ್ಟಿದ್ದು, ಅವರ ದೇಹದ ಮೇಲೆ 49 ಕ್ಕೂ ಹೆಚ್ಚು ಗಾಯಗಳಾಗಿವೆ. ದಾಳಿಯ ನಂತರ ಅವರ ರಕ್ತ ಹೆಪ್ಪುಗಟ್ಟಿತ್ತು ಮತ್ತು ಅವರ ಬೆನ್ನಿಗೆ ಪೆಟ್ಟಾಗಿದೆ, ಇದರಿಂದಾಗಿ ತೀವ್ರವಾಗಿ ರಕ್ತಸ್ರಾವವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ವರದಿಯನ್ನು ತ್ರಿಶೂರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯು ತಿಳಿಸಿದೆ. ಸೆಪ್ಟೆಂಬರ್ 30 ರ ತಡರಾತ್ರಿ ಅವರನ್ನು ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಯಿತು ಮತ್ತು ಅವರಿಗೆ ಗಾಯಗಳಿದ್ದ ಕಾರಣ ತಕ್ಷಣ ಅವರನ್ನು ಶಸ್ತ್ರಚಿಕಿತ್ಸಾ ವಾರ್ಡ್ಗೆ ವರ್ಗಾಯಿಸಲಾಯಿತು. ಅವರ ದೇಹದ ಮೇಲೆ 40ಕ್ಕೂ ಹೆಚ್ಚು ಗಾಯಗಳಾಗಿವೆ. ಗಾಯಗಳನ್ನು ಗಮನಿಸಿದ್ರೆ ಮೃತನಿಗೆ ತೀಕ್ಷ್ಣವಾದ ಕೋಲುಗಳಿಂದ ಹೊಡೆದಿರಬಹುದು ಎಂದು ವರದಿ ಹೇಳಿದೆ.
ವರದಿಗಳ ಪ್ರಕಾರ, 32 ವರ್ಷದ ಸಮೀರ್ನನ್ನು 10 ಕಿಲೋಗ್ರಾಂಗಳಷ್ಟು ಗಾಂಜಾ ಜೊತೆ ಹಿಡಿದ ನಂತರ ಪೂರ್ವ ಕೋಟೆ ನಿಲ್ದಾಣದ ಪೊಲೀಸ್ ಅಧಿಕಾರಿಗಳು ಸೆಪ್ಟೆಂಬರ್ 29 ರಂದು ಬಂಧಿಸಿದ್ದರು. ಅವನನ್ನು ವಶಕ್ಕೆ ತೆಗೆದುಕೊಂಡಾಗ ಶಮೀರ್ ಅವರ ಪತ್ನಿ ಮತ್ತು ಇತರ ಇಬ್ಬರು ಇದ್ದರು. ಬಳಿಕ ಶಮೀರ್ ನನ್ನು ಅನಾರೋಗ್ಯವಾಗಿದ್ದಾರೆಂದು ಆಸ್ಪತ್ರೆಗೆ ಸೇರಿಸಲಾಗಿತ್ತು.