ಟಿಕ್​ಟಾಕ್ ಸ್ಟಾರ್ ಸಮೀರ್​ ಗಾಯಕ್​ವಾಡ್ ಆತ್ಮಹತ್ಯೆ

sameer gayakvad
Share on facebook
Share on twitter
Share on linkedin
Share on whatsapp
Share on telegram
Share on email
Share on print

ಮುಂಬೈ(22-02-2020): ಟಿಕ್​ಟಾಕ್ ಸ್ಟಾರ್ 22 ವರ್ಷದ ಯುವಕ ಸಮೀರ್​ ಗಾಯಕ್​ವಾಡ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದ ಸಮೀರ್​ ಗಾಯಕ್​ವಾಡ್​ ಅಪಾರ ಪ್ರಮಾಣದ ಅಭಿಮಾನಿಗಳನ್ನೂ ಗಳಿಸಿದ್ದರು. ಇದೀಗ ಅವರ ಸಾವು ಅಭಿಮಾನಿಗಳಿಗೆ ಆಘಾತ ಉಂಟುಮಾಡಿದ್ದು, ಸಾವಿನ ಬಗ್ಗೆ  ಹಲವು ಪ್ರಶ್ನೆಗಳನ್ನೂ ಹುಟ್ಟುಹಾಕಿದೆ.

 ಇನ್​ಸ್ಟಾಗ್ರಾಂನಲ್ಲಿ ಸುಮಾರು 2,73,090 ಜನ ಹಿಂಬಾಲಕರನ್ನು ಸಮೀರ್ ಹೊಂದಿದ್ದಾರೆ. ಟಿಕ್​ಟಾಕ್ ಬ್ಯಾನ್ ನಂತರ ಇನ್​ಸ್ಟಾಗ್ರಾಂ ರೀಲ್ಸ್​ ಮೂಲಕ ಅಭಿಮಾನಿಗಳನ್ನು ತಲುಪುತ್ತಿದ್ದ ಸಮೀರ್ ದಿಢೀರ್ ಸಾವು ಅಭಿಮಾನಿಗಳಲ್ಲಿ ಆತಂಕ ಉಂಟು ಮಾಡಿದೆ.

ಮೇಲ್ನೋಟಕ್ಕೆ ಇದು ಆತ್ಮಹತ್ಯೆಯಂತೆಯೇ ಕಂಡುಬರುತ್ತಿದ್ದು, ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು