ಸಾಲ ಪಡೆಯಲು ಜಾಮೀನು ನೀಡುವವರು ಇನ್ನು ಮುಂದೆ ಎಚ್ಚರಿಕೆಯಿಂದಿರಿ…. ಬ್ಯಾಂಕುಗಳಿಗೆ ಹೆಚ್ಚಿನ ಅಧಿಕಾರ ನೀಡುವ ಕೇಂದ್ರ ಸರಕಾರದ ಹೊಸ ನೀತಿಯನ್ನು ಎತ್ತಿಹಿಡಿಯಿತು ಸುಪ್ರೀಂ ಕೋರ್ಟ್!

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ: ಸಾಲ ಪಡೆಯಲು ಜಾಮೀನು ನಿಂತವರು ಇನ್ನು ಮುಂದೆ ಎಚ್ಚರಿಕೆಯಲ್ಲಿರುವುದು ಒಳಿತು. ಇಲ್ಲದಿದ್ದರೆ ಗಂಡಾಂತರ ತಪ್ಪಿದ್ದಲ್ಲ.

ಐಬಿಸಿ ಅಡಿಯಲ್ಲಿ ಬ್ಯಾಂಕಿನಿಂದ ಸಾಲ ಪಡೆದವರು ಅದನ್ನು ತೀರಿಸಲು ವಿಫಲವಾದ ಪಕ್ಷದಲ್ಲಿ, ಜಾಮೀನು ನಿಂತವರ ವಿರುದ್ಧ ಬ್ಯಾಂಕುಗಳಿಗೆ ಕ್ರಮ ಕೈಗೊಳ್ಳಬಹುದಾಗಿದೆ. ಬ್ಯಾಂಕುಗಳಿಗೆ ಕಾನೂನಾತ್ಮಕವಾಗಿ ಹೆಚ್ಚಿನ ಅಧಿಕಾರ ಸಿಗಲಿದೆ.

ಹಣಕಾಸು ನಷ್ಟ ಮತ್ತು ದಿವಾಳಿ ಸಂಹಿತೆ ಅಡಿಯಲ್ಲಿ ಸಾಲ ಪಡೆಯುವ ವೇಳೆ ಜಾಮೀನು ನಿಂತವರ ಮೇಲೆಯೂ ಕ್ರಮ ಕೈಗೊಳ್ಳುವ ಅಧಿಕಾರವನ್ನು ಕೇಂದ್ರ ಸರಕಾರವು ಬ್ಯಾಂಕುಗಳಿಗೆ ನೀಡಿತ್ತು. ಇದೀಗ ಇದರ ಸಿಂಧುತ್ವವನ್ನು ಎತ್ತಿ ಹಿಡಿದ ಸುಪ್ರೀಮ್ಕೋರ್ಟ್, ಜಾಮೀನು ನಿಂತ ವ್ಯಕ್ತಿಗಳು ಸಾಲದ ಮೊತ್ತವನ್ನು ಬ್ಯಾಂಕುಗಳಿಗೆ ಮರುಪಾವತಿ ಮಾಡುವ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದಿದೆ.

ಮೂಲಕ ದಿವಾಳಿತನ ಸಂಹಿತೆ (ಐಬಿಸಿ) ಅಡಿಯಲ್ಲಿ ಕಾರ್ಪೊರೇಟ್ ಅಥವಾ ಕಂಪನಿಗಳಿಗೆ ನೀಡಲಾದ ಸಾಲಕ್ಕೆ ಜಾಮೀನು ನಿಲ್ಲುವವರಿಗೆ ಎಚ್ಚರಿಕೆ ನೀಡಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು