ಕೇಸರಿ ನಾಯಕನ ಗುಂಡಿಟ್ಟು ಹತ್ಯೆ

saffron leader
Share on facebook
Share on twitter
Share on linkedin
Share on whatsapp
Share on telegram
Share on email
Share on print

ಫಿರೋಜಾಬಾದ್ (17-10-2020): ಉತ್ತರಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷದ ನಾಯಕನನ್ನು ಅಪರಿಚಿತ ವ್ಯಕ್ತಿಗಳು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.

ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯಲ್ಲಿ ಅಪರಿಚಿತ ಹಲ್ಲೆಕೋರರು ಗುಂಡಿಕ್ಕಿ ಕೊಂದಿದ್ದಾರೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಎಸ್‌ಎಸ್‌ಪಿ ಪಟೇಲ್ ಹೇಳಿದ್ದಾರೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಬೈಕ್‌ ನಲ್ಲಿ ಬಂದ ಮೂವರು ಹಲ್ಲೆಕೋರರು ಬಿಜೆಪಿ ಮುಖಂಡ ಡಿ.ಕೆ.ಗುಪ್ತಾ ಅವರ ಮೇಲೆ ಮೂರು ಸುತ್ತು ಗುಂಡು ಹಾರಿಸಿದರು, ನಂತರ ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಬಿಜೆಪಿ ಫಿರೋಜಾಬಾದ್‌ನ ವಿಭಾಗೀಯ ಉಪಾಧ್ಯಕ್ಷರಾಗಿದ್ದ ಗುಪ್ತಾ ಅವರು ಶುಕ್ರವಾರ ರಾತ್ರಿ ದಾಳಿ ನಡೆದಾಗ ಅಂಗಡಿ ಮುಚ್ಚಿ ತೆರಳುತ್ತಿದ್ದರು. ಗುಪ್ತಾ ತನ್ನ ಅಂಗಡಿಯನ್ನು ಮುಚ್ಚಿದ ನಂತರ ಮನೆಗೆ  ಹೊರಟು ಹೋಗುತ್ತಿದ್ದಾಗ ಮೂವರು ಬೈಕ್‌ನಲ್ಲಿ ಬಂದ ಹಲ್ಲೆಕೋರರು ಆತನ ಮೇಲೆ ಗುಂಡು ಹಾರಿಸಿದರು ಎಂದು ಪಟೇಲ್ ಹೇಳಿದ್ದಾರೆ.

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು