ಭೋಪಾಲ್ (14-12-2020): ಶೂದ್ರರಿಗೆ ಶೂದ್ರರು ಎಂದರೆ ಬೇಸರವಾಗುವುದು ಏಕೆ? ಅವರಿಗೆ ಅಜ್ಞಾನದಿಂದ ಸಾಮಾಜಿಕ ವ್ಯವಸ್ಥೆಯನ್ನೇ ಅರ್ಥೈಸಲು ಸಾಧ್ಯವಾಗುವುದಿಲ್ಲ ಎಂದು ವಿವಾದಾತ್ಮಕ ಸಂಸದೆ ಸಾದ್ವಿ ಪ್ರಜ್ಞಾ ಸಿಂಗ್ ಠಾಕೂರು ಪ್ರಶ್ನಿಸಿದ್ದು ಮತ್ತೆ ವಿವಾದಕ್ಕೆ ಕಾರಣರಾಗಿದ್ದಾರೆ.
ಮಧ್ಯಪ್ರದೇಶದ ಸೆಹೋರ್ ನಲ್ಲಿ ಮಾತನಾಡಿದ ಪ್ರಜ್ಞಾ ಸಿಂಗ್ ಠಾಕೂರು, ನಮ್ಮ ಸಾಮಾಜಿಕ ವ್ಯವಸ್ಥೆಯು ಧರ್ಮಶಾಸ್ತ್ರದ ಪ್ರಕಾರ ನಾಲ್ಕು ಭಾಗವಾಗಿ ವಿಂಗಡನೆಯಾಗಿದೆ ಅದನ್ನು ಶೂದ್ರರು ಅರ್ಥ ಮಾಡಿಕೊಂಡಿಲ್ಲ ಎಂದು ಹೇಳಿದ್ದಾರೆ.
ಬ್ರಾಹ್ಮಣರನ್ನು ಬ್ರಾಹ್ಮಣರು ಎಂದು ಕರೆದರೆ, ಕ್ಷತ್ರಿಯರನ್ನು ಕ್ಷತ್ರಿಯರು ಎಂದು ಕರೆದರೆ ಅವರಿಗೆ ಬೇಸರವಾಗುವುದಿಲ್ಲ. ವೈಶ್ಯರನ್ನು ವೈಶ್ಯರು ಎಂದರೆ ಬೇಸರ ಮಾಡಿಕೊಳ್ಳುವುದಿಲ್ಲ. ಆದರೆ ಶೂದ್ರರನ್ನು ಶೂದ್ರರು ಎಂದರೆ ಬೇಸರ ಮಾಡಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.