ಸದನದಲ್ಲಿ ‘ಸಿಡಿ’ ಗದ್ದಲ, ಹತ್ತು ನಿಮಿಷ ಕಲಾಪ ಮುಂದೂಡಿದ ಸ್ಪೀಕರ್

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಕೇಸ್ ಹಗರಣ ಚರ್ಚೆ ನಿನ್ನೆ ಸದನದಲ್ಲಿ ಚರ್ಚಿಸಿದ ಕಾಂಗ್ರೆಸ್ ಶಾಸಕರು ಇಂದು ಮತ್ತೆ ಕಲಾಪದಲ್ಲಿ ‘ಸಿಡಿ’ದೆದ್ದಿದ್ದಾರೆ.

ಕಲಾಪ ಆರಂಭವಾದ ಕೂಡಲೇ ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ಕಾಂಗ್ರೆಸ್ ಶಾಸಕರು ಕೆಲಕಾಲ ‘ಸಿಡಿ’ಗಳನ್ನು ಕೈಯಲ್ಲಿ ಹಿಡಿದು ಪ್ರದರ್ಶಿಸುವ ಮೂಲಕ ಪ್ರತಿಭಟಿಸಿದರು. ಸದನದ ಬಾವಿಗಿಳಿದು ‘ಸಿಡಿ ಸರ್ಕಾರಕ್ಕೆ ಧಿಕ್ಕಾರ’ ಎಂದು ಕೂಗುತ್ತಾ ಪ್ರತಿಭಟಿಸಿದರು. ‘ಇದು ಪ್ರಶ್ನೋತ್ತರ ಸಮಯ ದಯವಿಟ್ಟು ಕುಳಿತುಕೊಳ್ಳಿ’ ಎಂದು ಸ್ಪೀಕರ್ ಹೇಳಿದರೂ ಕೇಳದ ‘ಕೈ’ ನಾಯಕರು ಪ್ರತಿಭಟನೆ ಮುಂದುವರೆಸಿದರು. ಇದನ್ನು ಗಮನಿಸಿದ ಸ್ಪೀಕರ್ ಹತ್ತು ನಿಮಿಷಗಳ ಕಾಲ ಕಲಾಪ ಮುಂದೂಡಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು