ಗುವಾಹಟಿ(25-01-2021): ಗುವಾಹಟಿಯಲ್ಲಿ ರಾಶಿ ರಾಶಿ ನಾಣ್ಯಗಳಿದ್ದ ಗೋಣಿ ಚೀಲವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಚಾಂದಮರಿ ಠಾಣೆ ಪೊಲೀಸರು ಹಣ ತುಂಬಿದ ಚೀಲಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಪ್ಯಾಕೆಟ್ಗಳಲ್ಲಿ ನಾಣ್ಯಗಳು ತುಂಬಿದ್ದವು ಮತ್ತು ಪೊಲೀಸರು ನಾಣ್ಯಗಳನ್ನು ಎಣಿಸದ ಕಾರಣ ನಿಖರವಾದ ಮೌಲ್ಯವನ್ನು ಇನ್ನೂ ಹೇಳಲಾಗಿಲ್ಲ. ಗುವಾಹಟಿಯ ಭಾಸ್ಕರ್ ನಗರ ಪ್ರದೇಶದಲ್ಲಿ ನಾಣ್ಯಗಳು ಪತ್ತೆಯಾಗಿದೆ ಎಂದು ಚಾಂದುಮುರಿ ಠಾಣಾ ಆಫೀಸರ್ ಇನ್ ಚಾರ್ಜ್ ಪ್ರದೀಪ್ ಹಲೋಯಿ ತಿಳಿಸಿದ್ದಾರೆ.
ವರದಿಗಳ ಪ್ರಕಾರ, ಕೆಲವು ಅಪರಿಚಿತರ ತಂಡ ನಾಣ್ಯಗಳನ್ನು ತುಂಬಿದ ಮೂರು ಚೀಲಗಳನ್ನು ಪ್ರದೇಶದ ಒಂದು ಮನೆಯ ಬಳಿ ಎಸೆದಿದ್ದಾರೆ ಎನ್ನಲಾಗಿದೆ.
ಕಸದ ರಾಶಿ ಬಳಿ ಅಶ್ರಪುಲ್ ಎಂಬವರು ಹಣವನ್ನು ಕಂಡುಕೊಂಡಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ. ಈ ಕುರಿತು ತನಿಖೆ ನಡೆಯುತ್ತಿದೆ.