ಸಚಿವರಾದ ಡಾ. ಸುಧಾಕರ್ ಶಾಸಕರಾಗಲೂ ಅರ್ಹರಲ್ಲ, ಕೂಡಲೇ ರಾಜಿನಾಮೆ ಕೊಡಬೇಕು: ಮಹಿಳಾ ಕಾಂಗ್ರೆಸ್ ಘಟಕದಿಂದ ಆಗ್ರಹ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ಆರೋಗ್ಯ ಸಚಿವ ಡಾ.ಸುಧಾಕರ್ ಅವರು ನಿನ್ನೆ ನೀಡಿದ ‘ಏಕಪತ್ನಿ ವ್ರತಸ್ಥ’ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದೆ.

ಸುಧಾಕರ್ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಕಾಂಗ್ರೆಸ್ ಶಾಸಕರು ನಿನ್ನೆ ಸದನದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕಾಂಗ್ರೇಸ್ಸಿನ ಹಲವು ಶಾಸಕರು, ಮಹಿಳಾ ಶಾಸಕಿಯರು ಸುಧಾಕರ್ ಹೇಳಿಕೆಗೆ ತೀವ್ರವಾಗಿ ಖಂಡಿಸಿ ರಾಜಿನಾಮೆ ನೀಡಬೇಕೆಂದು ಒತ್ತಾಯಿಸಿದರು.

ಬಿಜೆಪಿಯವರ ಕನಸೇನು, ಹಿಂದೂ ರಾಷ್ಟ್ರ, ಇದು ಹಿಂದೂ ಸಂಸ ಒಪ್ಪಿಕೊಳ್ಳುವಂತದೇ, ಡಾ.ಸುಧಾಕರ ಸಚಿವರಾಗಲೂ ಅಷ್ಟೇ ಅಲ್ಲ, ಶಾಸಕರಾಗಲೂ ಅರ್ಹರಲ್ಲ,ರಾಜಕೀಯದಲ್ಲಿ ಮಹಿಳೆಯನ್ನು ಸಂಶಯವಾಗಿ ನೋಡುವಂತಹ ಹೇಳಿಕೆಯಾಗಿದೆ. ನೀವು ಕೂಡಲೇ ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಮನೆಯಲ್ಲಿರಬೇಕು. ನೀವು ಆರು ಜನ ಸಚಿವರು ರಾಜಿನಾಮೆ ಕೊಡಬೇಕೆಂದು ಕಾಂಗ್ರೆಸ್ ಮಹಿಳಾ ಘಟಕ ಒತ್ತಾಯಿಸಿದೆ.

‌225 ಶಾಸಕರನ್ನು ತನಿಖೆಯಾಗಲಿ, ಯಾರು ಏಕಪತ್ನಿ ವ್ರತಸ್ಥರು ಎಂಬುದು ಬಹಿರಂಗವಾಗುತ್ತದೆ ಎಂದು ಡಾ.ಸುಧಾಕರ್ ಅವರ ಹೇಳಿಕೆ ಇಡೀ ಮಹಿಳಾ ಕುಲಕ್ಕೆ ಅಪಮಾನ, ಅಗೌರವ ತರುವಂತದ್ದು, ಸುಧಾಕರ್ ಅವರ ಹೇಳಿಕೆಯನ್ನು ನಾವು ಗ್ರಹಮಂತ್ರಿ, ಪ್ರಧಾನಮಂತ್ರಿಗಳಿಗೂ ಕಳುಹಿಸುತ್ತೇವೆ. ಇಡೀ ದೇಶದ ಎಲ್ಲ ಮಹಿಳೆಯರಿಗೂ ಇದು ಅಗೌರವ ಹೇಳಿಕೆ, ಸಿಡಿ ಪ್ರಕರಣದಲ್ಲಿ ಸಿಲುಕಿರುವ ಆ ಹೆಣ್ಣು ಮಗಳಿಗೆ ಪತ್ತೆ ಹಚ್ಚಲು ಅದೆಷ್ಟು ದಿನಗಳು ಬೇಕು. ಸರ್ಕಾರದ ಮುಂದೆ ಯಾಕೆ ಬರ್ತಾ ಇಲ್ಲ, ಸರ್ಕಾರದ ಮೇಲೆ ನಂಬಿಕೆ ಇಲ್ವಾ, ಇದು ತನಿಖೆ ನಡೆಸಬೇಕು, ಆ ಹೆಣ್ಣು ಮಗಳಿಗೆ ನ್ಯಾಯ ದೊರಕಿಸಿಕೊಡಬೇಕೆಂದು ನಾವು ಒತ್ತಾಯಿಸುತ್ತೇವೆ ಎಂದು ಮಹಿಳಾ ಕಾಂಗ್ರೆಸ್ ಘಟಕದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್, ಸೌಮ್ಯ ರೆಡ್ಡಿ ಸೇರಿದಂತೆ ಇನ್ನಿತರ ಮಹಿಳಾ ಕಾಂಗ್ರೆಸ್ ಸದಸ್ಯರು ಪತ್ರಿಕಾಗೋಷ್ಠಿ ನಡೆಸಿ ಆಗ್ರಹಿಸಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು