ಸಭಾಪತಿ ವಿರುದ್ಧದ ಅವಿಶ್ವಾಸ ನಿರ್ಣಯವು ಮತ್ತೆ ಚರ್ಚೆಗೆ ತರಲು ಬಿಡುವುದಿಲ್ಲವೆಂದು ಕಾಂಗ್ರೆಸ್

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು(14-12-2020): ಗೋ ಹತ್ಯೆ ವಿಧೇಯಕ ಮಂಡನೆಗೆ ಅವಕಾಶ ಮಾಡಿಕೊಡದ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಬಿಜೆಪಿ ಯತ್ನಕ್ಕೆ ಸಭಾಪತಿ ಅವಕಾಶ ನೀಡಿರಲಿಲ್ಲ. ಈಗ ಮತ್ತೆ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಬಿಜೆಪಿ ಸಿದ್ಧವಾಗುತ್ತಿದೆ.

ಆದರೆ, ಸಭಾಪತಿ ವಿರುದ್ಧದ ಅವಿಶ್ವಾಸ ನಿರ್ಣಯ ಮಂಡನೆಯು ಒಂದು ಬಾರಿ ಸಭಾಪತಿಯವರಿಂದ ತಿರಸ್ಕಾರವಾಗಿರುವುದರಿಂದ ಅದನ್ನು ಇನ್ನೊಂದು ಬಾರಿ ಕಲಾಪದಲ್ಲಿ ಚರ್ಚೆಗೆ ತರದಂತೆ ನೋಡಿಕೊಳ್ಳಲು ಕಾಂಗ್ರೆಸ್ ತಯಾರಿ ನಡೆಸುತ್ತಿದೆ. ಈ ಬಗ್ಗೆ ಸದನದಲ್ಲಿ ಆಗ್ರಹಿಸಲು ಅದು ನಿರ್ಧರಿಸಿದೆ.

ಡಿಸೆಂಬರ್ ಏಳರಂದು ಆರಂಭವಾದ ಚಳಿಗಾಲದ ಅಧಿವೇಶನವು ಡಿಸೆಂಬರ್ ಹತ್ತರಂದು ಅನಿರ್ಧಿಷ್ಠಾದಿಗೆ ಮಂದೂಡಲಾಗಿತ್ತು. ನಾಳೆಯ ಕಲಾಪದಲ್ಲಿ ಸಭಾಪತಿಯ ವಿರುದ್ಧ ಬಿಜೆಪಿಯು ಮತ್ತೆ ಅವಿಶ್ವಾಸ ಮಂಡನೆಗೆ ತಯಾರಾಗುತ್ತಿರುವ ವಿಚಾರದಲ್ಲಿ ಬಿಜೆಪಿ-ಕಾಂಗ್ರೆಸ್ ನಡುವಿನ ಕಾನೂನಾತ್ಮಕ ಚರ್ಚೆಗಳು ಸಾಂವಿಧಾನಿಕ ಬಿಕ್ಕಟ್ಟಿಗೆ ಕಾರಣವಾಗುವ ಸಾಧ್ಯತೆಯಿದೆಯೆನ್ನಲಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು