ರಷ್ಯಾದಿಂದ ಸಿಂಗಲ್ ಡೋಸಿನ ‘ಸ್ಪುಟ್ನಿಕ್ ಲೈಟ್’ ಎಂಬ ಕೋವಿಡ್ ಲಸಿಕೆಯ ಹೊಸ ಆವೃತ್ತಿ ಬಿಡುಗಡೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಮಾಸ್ಕೋ: ರಷ್ಯಾವು ಒಂದೇ ಡೋಸಿನ ಕೋವಿಡ್ ಲಸಿಕೆಸ್ಪುಟ್ನಿಕ್ ಲೈಟ್ಅನ್ನು ಹೊಸತಾಗಿ ಬಿಡುಗಡೆಗೊಳಿಸಿದೆ. ಇದು  ಮೊದಲಸ್ಪುಟ್ನಿಕ್ ವಿಲಸಿಕೆಯ ಸಿಂಗಲ್ ಡೋಸ್ ಆವೃತ್ತಿಯಾಗಿದೆ.

ರಷ್ಯಾದಲ್ಲೇ ಮೊದಲು ತಯಾರಾಗಿದ್ದ ಸ್ಪುಟ್ನಿಕ್ ವಿ ಎಂಬ ಕೋವಿಡ್ ಲಸಿಕೆಯನ್ನು ಎರಡು ಡೋಸುಗಳಾಗಿ ಕೊಡಬೇಕಿತ್ತು. ಜಗತ್ತಿನಾದ್ಯಂತ ಅರುವತ್ತಕ್ಕೂ ಹೆಚ್ಚು ದೇಶಗಳಲ್ಲಿ ಅದನ್ನು ಬಳಸಲು ಅನುಮತಿಯೂ ದೊರಕಿತ್ತು.

ಒಂದೇ ಡೋಸಿನ ಹೊಸ ಆವೃತ್ತಿಗೆ ಹತ್ತು ಡಾಲರಿಗಿಂತಲೂ ಕಡಿಮೆ ಬೆಲೆ ನಿಶ್ಚಯಿಸಲಾಗಿದೆ. ಭಾರತದ ಸರಿಸುಮಾರು 700 ರೂಪಾಯಿಗಳಷ್ಟಾಗುತ್ತದೆ. ಇದರ ಕಾರ್ಯಕ್ಷಮತೆ 79.4 ಶೇಕಡಾ ಎಂದು ಅದರ ಉತ್ಪಾದಕರು ತಿಳಿಸಿದ್ದಾರೆ. ಅದೇ ವೇಳೆ ಎರಡು ಡೋಸುಗಳ ಮೊದಲ ಆವೃತ್ತಿಯ ಲಸಿಕೆಯ ಕಾರ್ಯಕ್ಷಮತೆ 91.6 ಶೇಕಡಾ ಆಗಿತ್ತು.

ಕಳೆದ ವರ್ಷದ ಡಿಸೆಂಬರ್ ಐದರಿಂದ ವರ್ಷದ ಎಪ್ರಿಲ್ ಐದರ ವರೆಗೆ ನಿರಂತರವಾಗಿ ನಡೆದ ಕೋವಿಡ್ ಲಸಿಕೆ ಉತ್ಪಾದನಾ ಕಾರ್ಯಕ್ರಮದ ಭಾಗವಾಗಿ ಇದನ್ನು ತಯಾರಿಸಲಾಗಿದೆ ಎಂದು ಆರ್ ಡಿಐಎಫ್ ತಿಳಿಸಿದೆ. ಆರ‍್‍ಡಿಐಎಫ್ ಎಂದರೆರಷ್ಯನ್ ನೇರ ಹೂಡಿಕೆ ನಿಧಿ‘ ಆಗಿದ್ದು, ಲಸಿಕೆಗಳ ಉತ್ಪಾದನೆಗೆ ಬೇಕಾದ ಹಣವನ್ನು ಇದರಿಂದಲೇ ವ್ಯಯಿಸಲಾಗಿದೆ.

ಪರೀಕ್ಷಾರ್ಥವಾಗಿ ಲಸಿಕೆ ನೀಡಿ 28 ದಿನಗಳ ಬಳಿಕ ನಡೆಸಿದ ಅಧ್ಯಯನದಲ್ಲಿ ಧನಾತ್ಮಕ ಫಲಿತಾಂಶ ಬಂದಿದೆ. ಜನರ ಮೇಲೆ ಬಳಸಲು ರಷ್ಯಾದ ಆರೋಗ್ಯ ಇಲಾಖೆಯ ಅನುಮತಿಯೂ ಸಿಕ್ಕಿದೆ.

ಆದರೆ ಹೊಸ ಲಸಿಕೆಗೆ ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿ, ಅಮೇರಿಕಾದ ಫುಡ್ ಆ್ಯಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಮೊದಲಾದ ಸಂಸ್ಥೆಗಳಿಂದ ಇದುವರೆಗೂ ಅಂಗೀಕಾರ ದೊರೆತಿಲ್ಲ. ಮುಂದಿನ ದಿನಗಳಲ್ಲಿ ದೊರೆಯುವುದೋ ಎಂದು ಕಾದು ನೋಡಬೇಕಿದೆ. ಜಗತ್ತಿನಾದ್ಯಂತ ಕೋವಿಡ್ ಲಸಿಕೆಗೆ ತೀವ್ರ ಬೇಡಿಕೆಯಿರುವ ಈ ಸಮಯದಲ್ಲಿ ಒಂದೇ ಡೋಸಿನ ಲಸಿಕೆಯು, ಶೀಘ್ರ ವಿತರಣೆಗೆ ಮತ್ತು ಸುಲಭ ಸಾಗಾಣಿಕೆಗೆ ನೆರವಾಗಬಹುದೆಂದು ನಿರೀಕ್ಷಿಸಲಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು