ಮಸ್ಕತ್(21-12-2020): ರೂಪಾಂತರಗೊಂಡ ಕೊರೋನಾ ವೈರಸ್ ಯುರೋಪಿಯನ್ ದೇಶಗಳಲ್ಲಿ ಕ್ಷಿಪ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಒಮನ್ ದೇಶವು ತನ್ನೆಲ್ಲಾ ಭೂ, ಜಲ, ವ್ಯೋಮ ಗಡಿಗಳನ್ನು ಮುಚ್ಚಲಿದೆ.
ಸೌದಿ ಅರೇಬಿಯಾ ಬಳಿಕ ರೂಪಾಂತರಗೊಂಡ ಕೊರೋನಾ ಕಾರಣದಿಂದ ತನ್ನ ಗಡಿಗಳನ್ನು ಮುಚ್ಚಲಿರುವ ಎರಡನೇ ಗಲ್ಫ್ ದೇಶವಾಗಿ ಒಮನ್ ಗುರುತಿಸಿಕೊಳ್ಳಲಿದೆ.
ಜನರ ಆರೋಗ್ಯವನ್ನು ಕಾಪಾಡಿಕೊಳ್ಳುವ ಮುಂಜಾಗ್ರತಾ ಕ್ರಮವಾಗಿ ಮಂಗಳವಾರ ಮಧ್ಯರಾತ್ರಿ ಒಂದು ಗಂಟೆಯ ಬಳಿಕ ಈ ನಿಯಮಾವಳಿ ಜಾರಿಗೆ ಬರಲಿದೆ ಎಂದು ಸ್ಟೇಟ್ ಟೆಲಿವಿಷನ್ ವರದಿ ಮಾಡಿದೆ.
ದೇಶದ ಎಲ್ಲಾ ಗಡಿಗಳನ್ನು ತಾತ್ಕಾಲಿಕವಾಗಿ ಮುಚ್ಚಲಿರುವುದಾಗಿ ಸೌದಿ ಅರೇಬಿಯಾ ಘೋಷಿಸಿತ್ತು. ಈ ನಡುವೆ ಕೆಲವು ಯುರೋಪಿಯನ್ ದೇಶಗಳೂ, ಭಾರತವೂ ಬ್ರಿಟನಿನಿಂದ ಬರುವ ಪ್ರಯಾಣಿಕರಿಗೆ, ವಿಮಾನಗಳಿಗೆ ತಾತ್ಕಾಲಿಕ ನಿಷೇಧ ಹೇರಿವೆ.