ನಿನ್ನೆ ಬಂಧನ, ಇಂದು ಸಿಬಿಐ ದಾಳಿ: 400ಕೋಟಿ ಡೀಲ್, ರೋಶನ್ ಬೇಗ್ ಗೆ ಸಿಬಿಐ ಡ್ರಿಲ್!

roshan baeg
Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು(23-11-2020): ನಿನ್ನೆಯಷ್ಟೇ ಬಂಧಿತ ಮಾಜಿ ಸಚಿವ ರೋಶನ್ ಬೇಗ್ ನಿವಾಸದ ಮೇಲೆ ಇಂದು ಬೆಳ್ಳಂಬೆಳಿಗ್ಗೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಲಕೇಶಿ ನಗರದ ಕೋಲ್ಸ್ ಪಾರ್ಕ್ ನಲ್ಲಿರುವ ರೋಶನ್ ಬೇಗ್ ಮನೆಗೆ  ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಖಲೆ ಪತ್ರಗಳನ್ನು ತನಿಖೆ ನಡೆಸುತ್ತಿದ್ದಾರೆ.

ಐಎಂಎ ಮುಖ್ಯಸ್ಥ ಮನ್ಸೂರ್‌ ಅಲಿ ಖಾನ್‌ ಈ ಮೊದಲು ಅಜ್ಞಾತ ಸ್ಥಳದಿಂದ ಆಡಿಯೋ ಬಿಡುಗಡೆ ಮಾಡಿ ತನ್ನ ಬಳಿಯಿಂದ ರೋಶನ್‌ ಬೇಗ್‌ 400 ಕೋಟಿ ರೂ.ಪಡೆದು ವಂಚಿಸಿದ್ದಾರೆ ಎಂದು ಆರೋಪ ಮಾಡಿದ್ದರು. ಈ ಆರೋಪವನ್ನು ರೋಶನ್  ಬೇಗ್‌ ನಿರಾಕರಿಸಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಮೊದಲು ಎಸ್‌ಐಟಿ, ವಿಚಾರಣೆಗೆ ಹಾಜರಾಗುವಂತೆ ಬೇಗ್‌ಗೆ ನೋಟಿಸ್‌ ನೀಡಿತ್ತು. ಆದರೆ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಕಳೆದ ವರ್ಷ ಜು.19ರಂದು ಎಸ್‌ಐಟಿಯು ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ವಾಪಾಸ್ಸು ಕಳುಹಿಸಿತ್ತು.

ಇದೀಗ ಪ್ರಕರಣದಲ್ಲಿ ಬೇಗ್ ಕೈವಾಡದ ಹಿನ್ನೆಲೆಯ ಹೆಚ್ಚಿನ ತನಿಖೆಗೆ ನಿನ್ನೆ ಅವರನ್ನು ಬಂಧಿಸಿ ಕೋರ್ಟ್ ಮುಂದೆ ಹಾಜರುಪಡಿಸಲಾಗಿತ್ತು. ಕೋರ್ಟ್ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

 

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು