ಮೈಸೂರು(27-11-2020): ಮೈಸೂರು ಡಿಸಿ ರೋಹಿನಿ ಸಿಂಧೂರಿ ಮತ್ತು ಕಾಂಗ್ರೆಸ್ ಎಮ್ ಎಲ್ ಸಿಗಳ ನಡುವಿನ ಜಟಾಪಟಿ ಮುಂದುವರಿದಿದೆ.
ಕಾಂಗ್ರೆಸ್ ಶಾಸಕರು ಇಂದು ಸುದ್ದಿಗೋಷ್ಟಿಯನ್ನು ನಡೆಸಿದ್ದು, ರೋಹಿನಿ ವಿರುದ್ಧ ಹರಿಹಾಯ್ದಿದ್ದಾರೆ. MLC ರಘು ಆಚಾರ್ ರೋಹಿಣಿ ಸಿಂಧೂರಿ ಐಎಎಸ್ ಪಾಸ್ ಆಗಿದ್ದು ನಿಜಾನಾ ಇಲ್ವಾ? ಅಥವಾ ಪ್ರಭಾವ ಬಳಸಿ ಐಎಎಸ್ ಪಾಸ್ ಮಾಡಿದ್ದಾರಾ? ಎಂದು ಪ್ರಶ್ನಿಸಿದ್ದಾರೆ.
ಶಾಸಕ ಹೆಚ್.ಪಿ.ಮಂಜುನಾಥ್ ಮಾತನಾಡಿ, ನೀವು ಕಾನೂನಿಗಿಂತ ದೊಡ್ಡವರಲ್ಲ. ನಿಮ್ಮನ್ನು ಪ್ರಶ್ನಿಸಲು ನಿಮಗೂ ಮೇಲಿನ ಅಧಿಕಾರಿಗಳಿದ್ದಾರೆ. ಅವರಿಗೂ ನೀವು ಉತ್ತರ ಕೊಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೋಹಿಣಿ ಸಿಂಧೂರಿ ಅವರಿಗೆ ಕೊಲೆಸ್ಟ್ರಾಲ್ ತಲೆಗೆ ಹತ್ತಿದೆ ಅದಕ್ಕೆ ಅವರು ಈ ರೀತಿ ನಡೆದುಕೊಳ್ಳುತ್ತಿದ್ದಾರೆ. ಅವರು ಜಿಲ್ಲಾಧಿಕಾರಿಯಾಗಿ ನಡೆದುಕೊಳ್ಳಲಿ. ಡಿಸಿ ಸ್ಥಾನಕ್ಕೆ ಧಕ್ಕೆಯಾಗುವಂತಹ ಕೆಲಸ ಮಾಡಬೇಡಿ ಎಂದು ಕಾಂಗ್ರೆಸ್ ನಾಯಕರು ಸಲಹೆ ನೀಡಿದ್ದಾರೆ.