‘ರಾಬಿನ್ ಹುಡ್’ ಶೈಲಿ ಸಮ್ಮತವಲ್ಲ : ಬಿಜೆಪಿ ಸಂಸದ ರೆಮ್ಡೆಸಿವಿರ್ ಲಸಿಕೆಯನ್ನು ಅಕ್ರಮ ದಾಸ್ತಾನಿರಿಸಿದ ಬಗ್ಗೆ ಬಾಂಬೆ ಹೈಕೋರ್ಟ್ ತರಾಟೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಮುಂಬೈ: ಮಹಾರಾಷ್ಟ್ರದ ಅಹ್ಮದ್‌ನಗರ ಸಂಸದ ಬಿಜೆಪಿಯ ಸುಜಯ್ ವಿಖೆ ಪಾಟೀಲ್ ಅವರ ಕ್ರಮವು ಬಡ ಮತ್ತು ನಿರ್ಗತಿಕ ರೋಗಿಗಳ ಜೀವವನ್ನು ಉಳಿಸಿರಬಹುದು, ಆದರೆ ಅವರು ಆಯ್ಕೆ ಮಾಡಿದ ಹಾದಿ ತಪ್ಪಾಗಿದೆ ಎಂದು ಬಾಂಬೆ ಉಚ್ಛ ನ್ಯಾಯಾಲಯ ಹೇಳಿದೆ.

ಬಿಜೆಪಿಯ ಲೋಕಸಭಾ ಸಂಸದ ಸುಜಯ್ ವಿಖೆ ಪಾಟೀಲ್ ಅವರು ನವದೆಹಲಿಯಿಂದ ರೆಮ್ಡೆಸಿವಿರ್ ಅನ್ನು ರಹಸ್ಯವಾಗಿ ಮತ್ತು ಅನಧಿಕೃತವಾಗಿ ಖರೀದಿಸಿರುವ ಬಗ್ಗೆ ಬಾಂಬೆ ಹೈಕೋರ್ಟ್ ಇಂದು ಆಕ್ಷೇಪ ವ್ಯಕ್ತಪಡಿಸಿದೆ. ಕೋವಿಡ್ ಲಸಿಕೆಯನ್ನು ಅಗತ್ಯವಿರುವ ರೋಗಿಗಳಲ್ಲಿ ಸಮಾನವಾಗಿ ವಿತರಿಸಬೇಕಿದೆ. ‘ರಾಬಿನ್ಹುಡ್ಶೈಲಿ ಸಮ್ಮತವಲ್ಲ ಎಂದು ಔರಂಗಾಬಾದ್ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಇಡೀ ಪ್ರಕರಣವನ್ನು ತನಿಖೆಗೊಳಪಡಿಸಬೇಕಿದೆ ಎಂದ ನ್ಯಾಯಾಲಯವು ಸಂಸದರ ನಡವಳಿಕೆಗೆ ಕ್ಲೀನ್ ಚಿಟ್ ನೀಡಿದ ಅಹ್ಮದ್ ನಗರ ಜಿಲ್ಲಾಧಿಕಾರಿಯ ನಡೆಯ ಬಗ್ಗೆಯೂ ತನ್ನ ಅಸಮಾಧಾನ ವ್ಯಕ್ತಪಡಿಸಿದೆ.

ದೆಹಲಿಯಿಂದ 10,000 ರೆಮ್‌ಡೆಸಿವಿರ್ ಚುಚ್ಚುಮದ್ದನ್ನು ಅನಧಿಕೃತವಾಗಿ ಖರೀದಿಸಿ ಅಹಮದ್ನಗರದಲ್ಲಿ ವಿತರಿಸಲಾಗಿದೆಎಂಬ ಆರೋಪದ ಮೇಲೆ ವಿಖೆ ಪಾಟೀಲ್ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳಬೇಕೆಂದು ಕೋರಿ ನಾಲ್ವರು ಕೃಷಿಕರು ಸಲ್ಲಿಸಿದ್ದರು. ಅರ್ಜಿಯನ್ನು ಕೈಗೆತ್ತಿಕೊಂಡು ವಿಚಾರಣೆ ನಡೆಸಿದ ನ್ಯಾಯಪೀಠವು ಅಭಿಪ್ರಾಯ ತಾಳಿದೆ.

ಇತ್ತೀಚೆಗೆ ಸಂಸದರು ತನ್ನ ಖಾಸಗಿ ವಿಮಾನದ ಮೂಲಕ, ರೆಮ್ಡಿಸಿವರ್ ಲಸಿಕೆಗಳನ್ನು ಹೊತ್ತು ತಂದು, ಶಿರ್ಡಿ ವಿಮಾನ ನಿಲ್ಲಾಣದಲ್ಲಿ ಇಳಿಸಿದ್ದರು. ರೆಮ್ಡಿಸಿವರ್ ಲಸಿಕೆಯಿರುವ ಪೆಟ್ಟಿಗೆಗಳನ್ನು ಇಳಿಸುವ ವೇಳೆ ಅದನ್ನು ವಿಡಿಯೋ ರೆಕಾರ್ಡಿಂಗ್ ಮಾಡಿದ್ದಲ್ಲದೇ, ಸಾಮಾಜಿಕ ಜಾಲತಾಣದಲ್ಲಿಯೂ ಅಪ್ಲೋಡ್ ಮಾಡಿದ್ದರು.

ಕೋವಿಡ್ ಎರಡನೇ ಅಲೆಯು ವ್ಯಾಪಕವಾದ ನಂತರ ಲಸಿಕೆಗೆ ದೇಶಾದ್ಯಂತ ಹೆಚ್ಚಿನ ಬೇಡಿಕೆಯಿದೆ. ನಡುವೆ ಕೆಲವು ರಾಜಕೀಯ ಪಕ್ಷಗಳು ಲಸಿಕೆ ವಿತರಣೆಯನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿವೆ ಎಂಬ ಆರೋಪಗಳೂ ಕೇಳಿ ಬಂದಿವೆ

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು