ಭೂಕುಸಿತದ ಭೀತಿಯಲ್ಲಿ ಅರ್ಕಾಣ ರಸ್ತೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಮುಡಿಪು(05-10-2020): ಮಿತ್ತಕೋಡಿಯಿಂದ ಪಜೀರು ಕಂಬಳಪದವಿಗೆ ಸಂಪರ್ಕಿಸುವ ಅರ್ಕಾಣ ಹೊಸ ರಸ್ತೆಯ ಇಕ್ಕೆಲಗಳಲ್ಲಿ ಕಳೆದ ವರ್ಷದಂತೆ ಈ ವರ್ಷವೂ ಗುಡ್ಡ ಕುಸಿದು ಮಣ್ಣು ರಸ್ತೆಗೆ ಬಿದ್ದಿದ್ದು ಅಪಾಯದ ಕರೆಗಂಟೆ ಬಾರಿಸುತ್ತಿದೆ.

ಬಿಸಿ ರೋಡ್ ಮೆಲ್ಕಾರ್ ನಿಂದ ದೇರಳಕಟ್ಟೆಯ ಕಡೆಗೆ ಸಂಚರಿಸುವವರು ಹಿಂದೆ ಮುಡಿಪು ಕ್ರಾಸ್ ದಾಟಿ ಹೋಗಬೇಕಾಗಿತ್ತು. ನಾಲ್ಕೈದು ವರ್ಷಗಳ ಹಿಂದೆ ಅರ್ಕಾಣ ರಸ್ತೆ ನಿರ್ಮಾಣವಾದ ಬಳಿಕ ಮೆಲ್ಕಾರ್ ನಿಂದ ದೇರಳಕಟ್ಟೆ ಯ ಕಡೆಗೆ ಸಂಚರಿಸುವವರು ಮತ್ತು ದೇರಳಕಟ್ಟೆ ಕಡೆಯಿಂದ ಮೆಲ್ಕಾರ್ ಗೆ ಸಂಚರಿಸುವವರು ಈ ಹೊಸ ರಸ್ತೆಯನ್ನೆ ಬಳಸುತ್ತಾರೆ. ಆದುದರಿಂದ ಈ ರಸ್ತೆಯಲ್ಲಿ ಹಗಲೂ ರಾತ್ರಿ ವಾಹನ ಓಡಾಟ ಇರುತ್ತದೆ. ರಸ್ತೆ ನಿರ್ಮಾಣವಾದಂದಿನಿಂದ ಪ್ರತಿ ಮಳೆಗಾಲಕ್ಕೆ ಇಕ್ಕೆಲಗಳಲ್ಲಿ ಗುಡ್ಡ ಕುಸಿದು ರಸ್ತೆಗೆ ಮಣ್ಣು ರಾಶಿ ಬೀಳುವುದು ಸಾಮಾನ್ಯವಾಗಿ ಬಿಟ್ಟಿದೆ.  ದೇಶದ ವಿವಿಧೆಡೆ ಭೂಕುಸಿತದಿಂದಾಗಿ ನೂರಾರು ಪ್ರಾಣಹಾನಿ ಉಂಟಾಗಿದ್ದ  ಕಳೆದ ವರ್ಷ ಈ ಅರ್ಕಾಣ ರಸ್ತೆಯ ಸಂಚಾರಕ್ಕೆ ನಿರ್ಬಂಧ ಹೇರಳಾಗಿತ್ತು. ಮಳೆಗಾಲ ಮುಗಿದ ಬಳಿಕ ರಸ್ತೆಯ ಮಣ್ಣನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟದ್ದು ಬಿಟ್ಟರೆ ಶಾಶ್ವತ ಪರಿಹಾರಕ್ಕೆ ಸಂಬಂಧಪಟ್ಟವರು ಮುಂದಾಗದಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತವಾಗಿದೆ. ಈ ಕುರಿತು ಕಳೆದ ವರ್ಷವೂ ಪ್ರಮುಖ ಪತ್ರಿಕೆ ಹಾಗೂ ಸುದ್ದಿತಾಣಗಳಲ್ಲಿ ಸುದ್ದಿಯಾಗಿತ್ತು. ಈ ವರ್ಷವೂ ಗುಡ್ಡ ಕುಸಿದು ರಸ್ತೆಗೆ ಬಿದ್ದಿದ್ದ ಮಣ್ಣನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದ್ದು ಶಾಶ್ವತ ಪರಿಹಾರದ ಕ್ರಮ ಕಂಡುಬಂದಿಲ್ಲ. ಅರ್ಕಾಣದ ತಗ್ಗು ತಿರುವು ಪ್ರದೇಶದಲ್ಲಿ ಅವೈಜ್ಞಾನಿಕವಾಗಿ ರಸ್ತೆ ನಿರ್ಮಾಣ ಮಾಡಲಾಗಿದೆ ಎಂದು ಮೊದಲಿನಿಂದಲೇ ಆರೋಪ ಕೇಳಿಬಂದಿತ್ತು. ಸ್ಥಳೀಯ ಶಾಸಕರು ಹಾಗೂ ಇತರ ಜನಪ್ರತಿನಿಧಿಗಳು ಈ ಬಗ್ಗೆ ಎಚ್ಚೆತ್ತುಕೊಳ್ಳದಿದ್ದರೆ ಮುಂದೊಂದು ದಿನ ಭೂಕುಸಿತ ಉಂಟಾಗಿ ಭಾರೀ ದೊಡ್ಡ ದುರಂತ ಅಪಾಯವಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು