ಹಣದುಬ್ಬರದಲ್ಲಿ ಅಸಹಜ ಏರಿಕೆ | ರಿಸರ್ವ್ ಬ್ಯಾಂಕಿನಿಂದ ಕಠಿಣ ಕ್ರಮಗಳ ಸಾಧ್ಯತೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ(12-11-2020): ಆಹಾರ ಸಾಮಾಗ್ರಿಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರಿಂದಾಗಿ ಚಿಲ್ಲರೆ ಹಣದುಬ್ಬರದಲ್ಲಿ ಅಸಹಜ ಏರಿಕೆ ಕಂಡಿದೆ. ಇದು ಕಳೆದ ಆರು ವರ್ಷಗಳಲ್ಲೇ ಅತಿ ಹೆಚ್ಚಿನ ಪ್ರಮಾಣದ್ದೆಂದು ‘ಅಂಕಿಅಂಶಗಳು ಮತ್ತು ಯೋಜನಾ ಅನುಷ್ಠಾನ ಸಚಿವಾಲಯ’ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಇಲಾಖೆಯು ಪ್ರಕಟಿಸಿದ ಗ್ರಾಹಕ ಬೆಲೆ ಸೂಚ್ಯಂಕ(CPI)ದ ಅಂಕಿ ಅಂಶಗಳ ಪ್ರಕಾರ, ಕಳೆದ ಅಕ್ಟೋಬರ್ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರವು 7.61 ಶೇಕಡಾ ಇತ್ತು. 2014 ರ ಮೇ ತಿಂಗಳ ಬಳಿಕದ ಅತಿ ಹೆಚ್ಚಿನ ಚಿಲ್ಲರೆ ಹಣದುಬ್ಬರ ಇದಾಗಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಇದರ ಪ್ರಮಾಣ 7.27 ಶೇಕಡಾ ಇತ್ತು.

ಅದೇ ವೇಳೆ ಗ್ರಾಹಕ ಆಹಾರ ಬೆಲೆ ಸೂಚ್ಯಂಕ (CFPI) ಅಕ್ಟೋಬರ್ ತಿಂಗಳಿನಲ್ಲಿ ಶೇಕಡಾ 11.07 ವರೆಗೆ ಏರಿತ್ತು. ಮತ್ತು ಸೆಪ್ಟೆಂಬರಿನಲ್ಲಿ ಅದರ ಪ್ರಮಾಣ 10.68 ಶೇಕಡಾ ಆಗಿತ್ತು. ಅಕ್ಟೋಬರ್ ತಿಂಗಳಲ್ಲಿ ಮಾಂಸ, ಮೀನು ಇತ್ಯಾದಿಗಳ ಹಣದುಬ್ಬರ 18.7 % ಇದ್ದರೆ, ತರಕಾರಿಗಳದ್ದು 22.51% ಮತ್ತು ಉಡುಗೆ-ತೊಡುಗೆ, ಪಾದರಕ್ಷೆಗಳದ್ದು 3.17 % ಆಗಿತ್ತು ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.

ಮೊದಮೊದಲು ಹಣ್ಣು, ತರಕಾರಿಗಳಲ್ಲಿ ಕಾಣಿಸಿಕೊಂಡ ಬೆಲೆಯೇರಿಕೆ ಬರುಬರುತ್ತಾ ಎಲ್ಲಾ ಆಹಾರ ವಸ್ತುಗಳಿಗೆ ವ್ಯಾಪಿಸಿದೆ. ಆಹಾರ ವಸ್ತುಗಳ ಬೆಲೆಯೇರಿಕೆಯು ಬಡ್ಡಿದರ ನಿರ್ಧರಿಸುವಲ್ಲೂ ಪ್ರಮುಖ ಪಾತ್ರವಹಿಸುತ್ತದೆ ಎನ್ನಲಾಗಿದೆ. ಇದು ಆರ್ಥಿಕತೆಯನ್ನು ಋಣಾತ್ಮಕವಾಗಿ ಬಾಧಿಸಬಹುದು. ಈ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಕೆಲವು ಕಠಿಣ ಕ್ರಮಗಳಿಗೆ ಮುಂದಾಗುವ ಸಾಧ್ಯತೆಯಿದೆ ಎಂದು ತಜ್ಞರ ಅಭಿಮತ.

https://amzn.to/38qGdVg

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು