ಇತರ ನಾಗರಿಕರಂತೆ … ಹೈಕೋರ್ಟ್‌ಗೆ ಹೋಗಿ: ರಿಪಬ್ಲಿಕ್ ಟಿವಿಗೆ ಸುಪ್ರೀಂ ಕೋರ್ಟ್ ವಾರ್ನಿಂಗ್

suprem court
Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ(15-10-2020): ಟಿಆರ್ ಪಿ ರೇಟಿಂಗ್ ಆರೋಪದ ಬಗ್ಗೆ ಸಿಬಿಐ ತನಿಖೆಗೆ ಆಗ್ರಹಿಸಿದ ರಿಪಬ್ಲಿಕ್ ಟಿವಿಯ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್ ಇಂದು ನಿರಾಕರಿಸಿದೆ. ಚಾನೆಲ್ ಬಾಂಬೆ ಹೈಕೋರ್ಟ್ ಅನ್ನು ತನಿಖೆಯನ್ನು ಎದುರಿಸುತ್ತಿರುವ ಇತರ ನಾಗರಿಕರಂತೆ ಸಂಪರ್ಕಿಸಬೇಕು ಎಂದು ಹೇಳಿದೆ.

ನೀವು ಈಗಾಗಲೇ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದೀರಿ. ಈ ನಡೆ ನಮಗೆ ಹೈಕೋರ್ಟ್‌ಗಳಲ್ಲಿ ನಂಬಿಕೆಯಿಲ್ಲ ಎಂಬ ಸಂದೇಶವನ್ನು ರವಾನಿಸುತ್ತದೆ. ಇತರ ನಾಗರಿಕರಂತೆ Cr.PC (ಕ್ರಿಮಿನಲ್ ಪ್ರೊಸೀಜರ್ ಕೋಡ್) ಅಡಿಯಲ್ಲಿ ತನಿಖೆಯನ್ನು ಎದುರಿಸಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಈ ಪ್ರಕರಣದ ಬಗ್ಗೆ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಮತ್ತು ಸಾಕ್ಷಿಯನ್ನು ಬೆದರಿಸುವ ಮೂಲಕ ರಿಪಬ್ಲಿಕ್ ಟಿವಿ ಕಾನೂನು ಪ್ರಕ್ರಿಯೆಯನ್ನು ದುರುಪಯೋಗಪಡಿಸುತ್ತಿದೆ ಎಂದು ಮುಂಬೈ ಪೊಲೀಸರು ಕಳೆದ ರಾತ್ರಿ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಮುಂಗಡ ಅರ್ಜಿಯಲ್ಲಿ ತಿಳಿಸಿದ್ದಾರೆ.

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು