ರಿಪಬ್ಲಿಕ್ ಟಿವಿಯನ್ನು ರಕ್ಷಿಸಲು ‘ಯುಪಿ ಮಾರ್ಗ’ | ಬಲಪಂಥೀಯ ಪರ ಮಾದ್ಯಮದ ರಕ್ಷಣೆಗೆ ಯೋಗಿ ಆದಿತ್ಯನಾಥ್ ತಂತ್ರ ಬಹಿರಂಗ!  

republic tv
Share on facebook
Share on twitter
Share on linkedin
Share on whatsapp
Share on telegram
Share on email
Share on print

ಲಕ್ನೋ(22-10-2020): ಈ ತಿಂಗಳ ಆರಂಭದಲ್ಲಿ ಮುಂಬೈನಲ್ಲಿ ಬಹಿರಂಗವಾದ ಟಿಆರ್‌ಪಿ ದಂಧೆಯ ಬಗ್ಗೆ ಕೇಂದ್ರ ತನಿಖಾ ಸಂಸ್ಥೆ ಸಿಬಿಐ ತನಿಖೆಗೆ ಉತ್ತರ ಪ್ರದೇಶ ಸರ್ಕಾರ ಪ್ರೇರೇಪಿಸಿದೆ? ಪ್ರಕರಣವನ್ನು ಕೇಂದ್ರದ ಅಧೀನ ಸಂಸ್ಥೆಗೆ ವರ್ಗಾಯಿಸಲು ಯುಪಿ ಆದಿತ್ಯನಾಥ್ ಸರಕಾರ ಪಿತೂರಿ ನಡೆಸಿದೆ ಎನ್ನುವುದು ಬಹಿರಂಗವಾಗಿದೆ.

ಟೆಲಿವಿಷನ್ ರೇಟಿಂಗ್ ಪಾಯಿಂಟ್‌ಗಳ ಪ್ರಕರಣವನ್ನು ಕೇಂದ್ರವು ನಿಯಂತ್ರಿಸುವ ತನಿಖಾ ಸಂಸ್ಥೆಗೆ ಹಸ್ತಾಂತರಿಸಲು ಮತ್ತು ಮುಂಬೈ ಪೊಲೀಸರನ್ನು ಪ್ರಕರಣದಿಂದ ದೂರ ಇಡುವಂತೆ ‘ಯುಪಿ ಮಾರ್ಗ’ ಅಳವಡಿಸಿಕೊಂಡಿದ್ದು ಮೇಲ್ನೋಟಕ್ಕೆ ತಿಳಿದು ಬಂದಿದೆ.

PRESS KANNADA

ಟಿಆರ್‌ಪಿ ರೇಟಿಂಗ್‌ಗಳನ್ನು ಕೃತಕವಾಗಿ ಹೆಚ್ಚಿಸಲು ಹಗರಣದಲ್ಲಿ ತೊಡಗಿದ್ದಾರೆಂದು ಆರೋಪಿಸಿ ಹಲವಾರು ಚಾನೆಲ್‌ಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅವರ ತನಿಖೆಯ ಭಾಗವಾಗಿ, ಅವರು ರಿಪಬ್ಲಿಕ್ ಟಿವಿಯ ಉನ್ನತ ಅಧಿಕಾರಿಗಳನ್ನು ವಿಚಾರಿಸಿದ್ದಾರೆ.

ಚಾನೆಲ್ ಮತ್ತು ಅದರ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಈ ಪ್ರಕರಣವನ್ನು ಮಹಾರಾಷ್ಟ್ರ ಸರ್ಕಾರದ ರಾಜಕೀಯ ದಾಳ ಎಂದು ಬಣ್ಣಿಸಿದ್ದಾರೆ. ಮಹಾರಾಷ್ಟ್ರ ಸರಕಾರವನ್ನು  ಶಿವಸೇನೆ, ಕಾಂಗ್ರೆಸ್ ಮತ್ತು ಎನ್‌ಸಿಪಿ ಒಳಗೊಂಡ ಒಕ್ಕೂಟ ನಡೆಸುತ್ತಿದೆ. ಮುಂಬೈ ಪೊಲೀಸ್ ಪ್ರಕರಣವು ಮಾಧ್ಯಮ ಸ್ವಾತಂತ್ರ್ಯದ ಮೇಲಿನ ದಾಳಿ ಎಂದು ಬಿಜೆಪಿಯ ಉನ್ನತ ನಾಯಕರು ಹೇಳಿದ್ದಾರೆ.

ಈ ಮಧ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಲಕ್ನೋನಲ್ಲಿ ದಾಖಲಾದ ಪ್ರಕರಣದ ಆಧಾರದಲ್ಲಿ ಯುಪಿ ಪೊಲೀಸರು ಶಿಫಾರಸ್ಸನ್ನು ಮಾಡಿದ್ದು, ಸಿಬಿಐ ತನಿಖೆಗೆ ಮುಂದಾಗಿದೆ. ಮಹಾರಾಷ್ಟ್ರ ಪೊಲೀಸರ ಕೈಯಲ್ಲಿದ್ದ ಪ್ರಕರಣವನ್ನು ಕೇಂದ್ರ ತನಿಖಾ ಸಂಸ್ಥೆಗೆ ವಹಿಸಲು ಷಡ್ಯಂತ್ರ ನಡೆದಿದೆ ಎನ್ನುವುದು ಈ ಮೂಲಕ ಬಹಿರಂಗವಾಗಿದ್ದು, ಪ್ರಕರಣದಲ್ಲಿ ತನ್ನದೇ ಶೈಲಿಯಲ್ಲಿ ವಕಾಲತ್ತು ಮಾಡುತ್ತಾ ಯೋಗಿ ಸರಕಾರ ರಿಪಬ್ಲಿಕ್ ಟಿವಿಯನ್ನು ರಕ್ಷಿಸಲು ಮುಂದಾಗಿರುವುದು ಬಹಿರಂಗವಾಗಿದೆ.

ಇದರ ಬೆನ್ನಲ್ಲೇ ಮಹಾ ಸರಕಾರ ಸಿಬಿಐಗೆ ನೀಡಿದ್ದ ಸಾಮಾನ್ಯ ಒಪ್ಪಿಗೆಯನ್ನು ಹಿಂತೆಗೆದು ಆದೇಶವನ್ನು ಹೊರಡಿಸಿದ್ದು, ಸಿಬಿಐಗೆ ಖಡಕ್ ವಾರ್ನಿಂಗ್ ನೀಡಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು