ಖ್ಯಾತ ಹೋರಾಟಗಾರ್ತಿ ಕರಿಮಾ ಬಲೂಚ್ ಶವವಾಗಿ ಪತ್ತೆ| ವಿಶ್ವದ 100 ಅತ್ಯಂತ ಪ್ರಭಾವಶಾಲಿ ಮಹಿಳೆಯರಲ್ಲಿ ಒಬ್ಬರಾಗಿದ್ದ ಕರಿಮಾ!

Karima Baloch
Share on facebook
Share on twitter
Share on linkedin
Share on whatsapp
Share on telegram
Share on email
Share on print

ಕೆನಡಾ(22-12-2020) ಖ್ಯಾತ ಸಾಮಾಜಿಕ ಹೋರಾಟಗಾರ್ತಿ ಕರಿಮಾ ಬಲೂಚ್ ಟೊರೊಂಟೊ ಕೆನಡಾದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಬಲೂಚಿಸ್ತಾನ್ ಪೋಸ್ಟ್ ವರದಿ ಮಾಡಿದೆ.

ಪಾಕಿಸ್ತಾನ ಸೇನೆ ಮತ್ತು ಬಲೂಚಿಸ್ತಾನ ಸರ್ಕಾರದ ದೌರ್ಜನ್ಯದ ಬಗ್ಗೆ ಅವರು ಧ್ವನಿ ಎತ್ತುತ್ತಿದ್ದರು. ಕರಿಮಾ ಕೆನಡಾದ ನಿರಾಶ್ರಿತರಾಗಿದ್ದು, 2016 ರಲ್ಲಿ ವಿಶ್ವದ 100 ಅತ್ಯಂತ “ಸ್ಪೂರ್ತಿದಾಯಕ ಮತ್ತು ಪ್ರಭಾವಶಾಲಿ” ಮಹಿಳೆಯರಲ್ಲಿ ಒಬ್ಬರಾಗಿ ಬಿಬಿಸಿ ಅವರನ್ನು ಹೆಸರಿಸಿತ್ತು.

ಭಾನುವಾರ, ಅವರು ನಾಪತ್ತೆಯಾಗಿದ್ದರು ಮತ್ತು ಅದೇ ದಿನ ಮಧ್ಯಾಹ್ನ 3 ಗಂಟೆಗೆ ಅವರ ಮೃತದೇಹ ಪತ್ತೆಯಾಗಿದೆ. ಬಲೂಚಿಸ್ತಾನದ ಪ್ರಸಿದ್ಧ ವ್ಯಕ್ತಿತ್ವವಾದ ಕರಿಮಾ ಬಲೂಚ್ ಅವರನ್ನು ಮಹಿಳಾ ಕ್ರಿಯಾಶೀಲತೆಯ ಹರಿಕಾರ ಎಂದು ಕರೆಯಲಾಗುತ್ತಿದೆ.

ಸ್ವಿಟ್ಜರ್ಲೆಂಡ್ನಲ್ಲಿ ನಡೆದ ವಿಶ್ವಸಂಸ್ಥೆಯ ಅಧಿವೇಶನಗಳಲ್ಲಿ ಅವರು ಬಲೂಚಿಸ್ತಾನದ ಬಗ್ಗೆ ಭಾಷಣವನ್ನು ಮಾಡಿದ್ದರು.

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು