7000 ರೂಪಾಯಿ ಬೆಲೆಯಲ್ಲಿ ರೆಮ್ಡಿಸಿವಿರ್ ಲಸಿಕೆ ಎಂದು ಬರೀ ನೀರು ತುಂಬಿಸಿದ ಸೀಸೆಗಳ ಮಾರಾಟ! ಗುಜರಾತಿನಲ್ಲೊಂದು ಮೋಸದ ಜಾಲ..

Share on facebook
Share on twitter
Share on linkedin
Share on whatsapp
Share on telegram
Share on email
Share on print

ಸೂರತ್: ರೆಮ್ಡಿಸಿವಿರ್ ಔಷಧಿ ಸೀಸೆಯೊಳಗೆ ನೀರು ತುಂಬಿಸಿ ಅತ್ಯಧಿಕ ಬೆಲೆಗೆ ಮಾರುತ್ತಿರುವುದು ನರೇಂದ್ರ ಮೋದಿ ತವರು ರಾಜ್ಯದಲ್ಲಿ ಪತ್ತೆಯಾಗಿದೆ. ವಿಚಾರವಾಗಿ ಗುಜರಾತಿನ ಯೋಗಿ ಚೌಕ್ ಎಂಬಲ್ಲಿ ದಿವ್ಯೇಶ್ ಎಂಬಾತನನ್ನು ಬಂಧಿಸಲಾಗಿದೆ.

ತನ್ನ ಕುಟುಂಬಿಕರಿಗಾಗಿ ಲಸಿಕೆ ಪಡೆದ ಜಗ್ನೇಶ್ ಮಲಾನಿ ಎಂಬವರಿಗೆ ನಕಲಿ ಲಸಿಕೆ ಜಾಲವು ಇರುವುದು ಪತ್ತೆಯಾಗಿದೆ. ಆರೋಪಿಯನ್ನು ಸಾರ್ವಜನಿಕರು ಹಿಡಿದು ಪೋಲೀಸರಿಗೆ ಒಪ್ಪಿಸಿದ್ದಾರೆ.

ಜಿಗ್ನೇಶ್ ಮಲಾನಿಯ ಕುಟುಂಬಿಕರಿಗೆ ಕೋವಿಡ್ ತಗುಲಿತ್ತು. ಇದಕ್ಕಾಗಿ ಅವರು ಸರಕಾರೀ ಆಸ್ಪತ್ರೆಗಳಲ್ಲಿ ರೆಮ್ಡಿಸಿವಿರ್ ಲಸಿಕೆಗಾಗಿ ಹುಡುಕಾಡಿದರು. ಆದರೆ ಅದು ಅವರಿಗೆ ಸಿಕ್ಕಿರಲಿಲ್ಲ. ಕೊನೆಗೆ ಹೊರಗೆ ವಿಚಾರಿಸಿದಾಗ ಅವರಿಗೆ ದಿವ್ಯೇಶ ಎಂಬವನ ದೂರಾವಾಣಿ ಸಂಖ್ಯೆ ದೊರೆಯಿತು.

ದಿವ್ಯೇಶನಿಗೆ ಕರೆ ಮಾಡಿದಾಗ ಸೀಸೆಯೊಂದಕ್ಕೆ 7000 ರೂಪಾಯಿಗಳ ಬೇಡಿಕೆಯಿಟ್ಟನು. ಬೇರೆ ದಾರಿ ಕಾಣದೇ ಇದನ್ನು ಒಪ್ಪಿದ ಮಲಾನಿ ಕುಟುಂಬವು ಆತನಿಂದ ರೆಮ್ಡುಸಿವಿರ್ ಸೀಸೆಗಳನ್ನು ಪಡೆದು, ತನ್ನ ವೈದ್ಯರಿಗೆ ನೀಡಿದ್ದರು.

ಸೀಸೆಯನ್ನು ಪರೀಕ್ಷಿಸಿದ ವೈದ್ಯರು, ಸೀಸೆಯ ಮೇಲೆ 2020 ರಲ್ಲೇ ಇದರ ಕಾಲಾವಧಿ ಮುಗಿದಿದೆಯೆಂದು ಬರೆದಿರುವುದನ್ನು ಪತ್ತೆ ಹಚ್ಚಿದರು. ಸಾಮಾನ್ಯವಾಗಿ ಸೀಸೆಯೊಳಗೆ ಹುಡಿ ರೂಪದಲ್ಲಿ ಔಷಧವಿರುವುದು. ಆದರೆ ದಿವ್ಯೇಶ್ ಕೊಟ್ಟ ಸೀಸೆಯೊಳಗೆ ಅದು ದ್ರಾವಣ ರೂಪದಲ್ಲಿರುವುದು ಕೂಡಾ ವೈದ್ಯರ ಸಂಶಯಕ್ಕೆ ಕಾರಣವಾಗಿತ್ತು.

ತಾನು ಮೋಸ ಹೋಗಿರುವುದು ತಿಳಿದ ಮಲಾನಿ, ದಿವ್ಯೇಶನಿಗೆ ಕರೆ ಮಾಡಿ ವಿಚಾರಿಸಿದಾಗ, ತಾನು ನೀಡಿರುವುದು ನಕಲಿ ಔಷಧಿಯೆಂದು ಒಪ್ಪಿಕೊಂಡಿದ್ದಲ್ಲದೇ, ಪಡೆದ ಹಣವನ್ನು ಗೂಗಲ್ ಪೇ ಮೂಲಕ ಹಿಂದಿರುಗಿಸಿದ್ದ. ನಂತರ ತಾನು ನೀಡಿದ ಲಸಿಕೆಯ ಸೀಸೆಗಳನ್ನು ಹಿಂಪಡೆಯಲು ಬಂದ ದಿವ್ಯೇಶನನ್ನು ಸಾರ್ಜನಿಕರು ಹಿಡಿದು ಪೋಲೀಸಿಗೆ ಒಪ್ಪಿಸಿದ್ದಾರೆ.

ಮಲಾನಿ ಕುಟುಂಬವು ಮೊದಲು ಸರ್ತಾನ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಹೋದಾಗ, ಅಲ್ಲಿನ ಪೋಲೀಸರು ಇದು ಉಮ್ರಾ ಠಾಣೆಯ ವ್ಯಾಪ್ತಿಯಲ್ಲಿ ಬರುವುದೆಂದು, ಅಲ್ಲಿಗೆ ಹೋಗಬೇಕೆಂದು ಸೂಚಿಸಿದರು. ಉಮ್ರಾ ಠಾಣೆಗೆ ಹೋದಾಗಲೂ ಅಲ್ಲೂ ಪ್ರಕರಣ ದಾಖಲಿಸದೇ ಸರ್ತಾನ ಠಾಣೆಗೆ ಹಿಂದಿರುಗಿಸಿದರು. ಸರ್ತಾನಾ ಠಾಣೆಯಲ್ಲಿ ತಂಬಾ ತಡವಾದ ನಂತರವೇ ಪ್ರಕರಣವನ್ನು ದಾಖಲಿಸಿ, ತನಿಖೆ ಕೈಗೊಂಡರು ಎಂದು ಮಲಾನಿ ಕುಟುಂಬದವರು ಆರೋಪಿಸಿದ್ದಾರೆ.

ಲಸಿಕೆಯ ತೀವ್ರ ಕೊರತೆಯಿರುವ ಸಮಯದಲ್ಲಿ ಅತ್ಯಧಿಕ ಬೆಲೆಗೆ ಲಸಿಕೆ ಮಾರಾಟ ಮಾಡಿರುವುದೆಂದು ನಾವು ಪ್ರಾಥಮಿಕ ದೂರು ದಾಖಲಿಸಿದ್ದೇವೆ. ಆದರೆ ಒಳಗಿರುವ ದ್ರಾವಣವು ನಕಲಿಯೇ ಅಸಲಿಯೇ ಎಂಬುದನ್ನು ಪರೀಕ್ಷಿಸಲಿದ್ದೇವೆ. ಸೀಸೆಯೊಳಗೆ ಔಷಧಿಯ ಬದಲು ನೀರು ತುಂಬಿಸಿರುವುದೆಂದು ನಮಗೆ ಬಂದ ದೂರಿನಲ್ಲಿ ಹೇಳಲಾಗಿದೆ.’ ಎಂದು ಅಸಿಸ್ಟಂಟ್ ಪೋಲೀಸ್ ಕಮಿಷನರ್ ಸಿಕೆ ಪಾಟೇಲ್ ತಿಳಿಸಿದ್ದಾರೆ.

ದೇಶಾದ್ಯಂತ ವೈದ್ಯಕೀಯ ಸಲಕರಣೆಗಳ ತೀವ್ರ ಕೊರತೆ ಕಂಡು ಬರುತ್ತಿರುವ ನಡುವೆ ಮೋಸದ ಜಾಲಗಳು ಸನ್ನಿವೇಶವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗೆಗೆ ಈ ಮೊದಲೂ ಹಲವಾರು ದೂರುಗಳು ಕೇಳಿ ಬಂದಿತ್ತು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು