ರೈತರನ್ನು ಅಂಬಾನಿ, ಆಧಾನಿಗೆ ಮಾರಲು ಬಯಸುವ ಆತ್ಮಸಾಕ್ಷಿ ಇಲ್ಲದ ಸರಕಾರ: ಪ್ರಶಾಂತ್ ಭೂಷಣ್

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ(3-1-2021): ಆತ್ಮಸಾಕ್ಷಿಯಿಲ್ಲದ ಈ ಸರಕಾರವು ರೈತರನ್ನೂ, ಕೃಷಿ ಕ್ಷೇತ್ರವನ್ನೂ ಅಂಬಾನಿ ಮತ್ತು ಆಧಾನಿಗೆ ಮಾರಲು ಬಯಸುತ್ತಿದೆ ಎಂದು ಪ್ರಶಾಂತ್ ಭೂಷಣ್ ಟ್ವೀಟಿಸಿದ್ದಾರೆ.

ಪ್ರತಿಭಟನಾ ಸ್ಥಳದಲ್ಲಿ ರೈತರ ಆತ್ಮಹತ್ಯೆ ಘಟನೆಯ ಬಗ್ಗೆ ಕಟು ಶಬ್ಧಗಳಲ್ಲಿ ಟೀಕಿಸಿದ ಭೂಷಣ್, “ಇದೊಂದು ದಾರುಣ ಘಟನೆಯಾಗಿದ್ದು, ಆತ್ಮಸಾಕ್ಷಿ ಸತ್ತ ಸರಕಾರವು ರೈತರನ್ನೂ, ಕೃಷಿ ಕ್ಷೇತ್ರವನ್ನೂ ಅಂಬಾನಿ ಮತ್ತು ಅಧಾನಿಗೆ ಮಾರಲು ಬಯಸುತ್ತಿದೆ. ಪ್ರತಿಭಟಿಸುತ್ತಿರುವ ರೈತರನ್ನು ಖಾಲಿಸ್ತಾನಿಗಳೆಂದು ಜರೆಯುತ್ತಿದೆ. ಈಗ ನಡೆಯುತ್ತಿರುವ ದುರಂತದ ಸಂಪೂರ್ಣ ಹೊಣೆಯು ಕೇಂದ್ರ ಸರಕಾರದ್ದಾಗಿದೆ.” ಎಂದು ತನ್ನ ಟ್ವಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಕಿಸಾನ್ ಏಕ್ತಾ ಮೋರ್ಚಾ ಟ್ವೀಟ್ ಮಾಡಿದ ಚಿತ್ರವನ್ನು ಹಂಚಿ, ಅವರು ಈ ಹೇಳಿಕೆ ನೀಡಿದ್ದಾರೆ. ಚಿತ್ರದಲ್ಲಿ ಆತ್ಮಹತ್ಯೆ ಮಾಡಿದ ರೈತನ ಮೃತದೇಹ ಮತ್ತು ಆತ್ಮಹತ್ಯೆಗೆ ಮೊದಲು ಆತ ಬರೆದ ಪತ್ರವನ್ನು ಪ್ರದರ್ಶಿಸಲಾಗಿದೆ.

ಕೊರೆಯುವ ಚಳಿಯಲ್ಲೂ ನಾವು ಪ್ರತಿಭಟಿಸುತ್ತಿದ್ದೆವು. ಆದರೂ ಕೇಂದ್ರ ಸರಕಾರವು ನಮ್ಮ ಮಾತನ್ನಾಲಿಸಲು ಮುಂದೆ ಬರುತ್ತಿಲ್ಲ. ನನ್ನ ಸಾವು ಇದಕ್ಕೊಂದು ಪರಿಹಾರವಾಗಬಹುದೆಂದು ನಿರೀಕ್ಷಿಸುವುದಾಗಿ ಪತ್ರದಲ್ಲಿ ಬರೆಯಲಾಗಿತ್ತು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು