ರೈತನಾಯಕ ಟಿಕಾಯತ್ ವಿರುದ್ಧದ ಮೊಕದ್ದಮೆ ರದ್ದುಗೊಳಿಸಬೇಕು : ಎಚ್ಡಿ ಕುಮಾರಸ್ವಾಮಿ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ರೈತನಾಯಕ ರಾಕೇಶ್ ಟಿಕಾಯತ್ ವಿರುದ್ಧದ ಮೊಕದ್ದಮೆ ರದ್ದುಗೊಳಿಸಬೇಕು ಎಂದು ಎಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ.

ರೈತರ ಧ್ವನಿ ಹತ್ತಿಕ್ಕುವ ಸರ್ಕಾರದ ಪ್ರಯತ್ನಗಳಿವು. ಪ್ರಚೋದನಕಾರಿ ಭಾಷಣದ ಆರೋಪದ ಮೇಲೆ ನಿಜಕ್ಕೂ ಕೇಸು ದಾಖಲಿಸುವುದೇ ಆದರೆ ಬಿಜೆಪಿಯ ಎಷ್ಟು ನಾಯಕರ ಮೇಲೆ ಎಷ್ಟೆಷ್ಟು ಪ್ರಕರಣ ದಾಖಲಾಗಬೇಕಿತ್ತು  ಎಂದು ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಹೋರಾಟ ಮಾಡಲು ದೆಹಲಿಗೇ ಬರಬೇಕೆಂದಿಲ್ಲ. ದೆಹಲಿಯಂತೆ ಇಲ್ಲಿಯೂ ಹೋರಾಟ ಮಾಡಬಹುದು ಎಂಬ ಟಿಕಾಯತ್ ಮಾತಿನಲ್ಲಿ ಯಾವುದೇ ಪ್ರಚೋದನಕಾರಿ ಅಂಶಗಳಿಲ್ಲ. ಹೋರಾಟ ಮಾಡುವುದು ಸಂವಿಧಾನ ನೀಡಿದ ಹಕ್ಕು. ಅವರು ಕೊಚ್ಚಿರಿ, ಕೊಲ್ಲಿರಿ ಎಂದೇನೂ ಹೇಳಲಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಶಿವಮೊಗ್ಗ ಮತ್ತು ಹಾವೇರಿಯ ರೈತ ಮಹಾಪಂಚಾಯತ್ ಭಾಷಣದ ವೇಳೆ ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆಂದು ಆರೋಪಿಸಿ, ಎರಡೂ ಕಡೆಗಳಲ್ಲಿ ಟಿಕಾಯತ್ ವಿರುದ್ಧ ಪ್ರಕರಣ ದಾಖಲಾಗಿತ್ತು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು