ರೆಪೊ ದರದಲ್ಲಿ ಬದಲಾವಣೆಯಿಲ್ಲ -ಆರ್ ಬಿಐ

rbi
Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ(09-10-2020): ಪಾಲಿಸಿ ರೆಪೊ ದರವು ಶೇ 4 ರಂತೆ ಬದಲಾಗದೆ ಉಳಿಯಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಶುಕ್ರವಾರ ಪ್ರಕಟಿಸಿದ್ದಾರೆ.

ಆರ್ಬಿಐ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದ ಕಾರಣ ಬಡ್ಡಿ ದರದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. 2019 ಫೆಬ್ರವರಿಯಲ್ಲಿ ದೊಡ್ಡ ಮಟ್ಟದಲ್ಲಿ ರೆಪೋ ದರದಲ್ಲಿ ಇಳಿಕೆಯಾಗಿತ್ತು. ಶೇಕಡಾ 2.50ರಷ್ಟು ರೆಪೋ ದರವನ್ನು ಕಡಿಮೆ ಮಾಡಲಾಗಿತ್ತು.

ಆರ್‌ಬಿಐ ಹಣಕಾಸು ನೀತಿ ಸಮಿತಿ ಸಭೆ ತೀರ್ಮಾನವನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದು, 2021 ರಲ್ಲಿ ರಿಯಲ್ ಜಿಡಿಪಿ ಶೇಕಡಾ 9.5 ರಷ್ಟು ಕುಸಿಯುವ ಸಾಧ್ಯತೆಯಿದೆ. ಆದರೆ ಶೀಘ್ರವಾಗಿ ಚೇತರಿಕೆ ಕಾಣಲಿದೆ. ಬೆಳ್ಳಿಯ ಪದರವು ಗೋಚರಿಸುತ್ತದೆ. ರಾಷ್ಟ್ರದ ಮನಸ್ಥಿತಿ ಭಯದಿಂದ ಭರವಸೆಗೆ ಬದಲಾಗಿದೆ ಎಂದು ಹೇಳಿದ್ದಾರೆ.

ಮೂರು-ವೇಗದ ಚೇತರಿಕೆಯಾಗಿದ್ದು, ಪ್ರತ್ಯೇಕ ವಲಯಗಳು ವಿಭಿನ್ನ ಪಥವನ್ನು ತೋರಿಸುತ್ತದೆ ಎಂದು ಹೇಳಿದರು.

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು