ಪಿಎನ್ ಬಿಗೆ  1 ಕೋಟಿ ರೂ.ದಂಡ ವಿಧಿಸಿದ ಆರ್ ಬಿಐ

pnb
Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ(14-11-2020): ಪಾವತಿ ಮತ್ತು ಸಟ್ಲ್ ಮೆಂಟ್ ವ್ಯವಸ್ಥೆಗಳ ಕಾಯ್ದೆಯ ಉಲ್ಲಂಘನೆಗಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ  1 ಕೋಟಿ ರೂ.ದಂಡವನ್ನು ವಿಧಿಸಿದೆ.

2010 ರ ಏಪ್ರಿಲ್‌ನಿಂದ ಆರ್‌ಬಿಐನಿಂದ ಅನುಮತಿಯಿಲ್ಲದೆ ಪಿಎನ್‌ಬಿ ಬ್ಯಾಂಕ್ ಲಿಮಿಟೆಡ್,  ಭೂತಾನ್‌ನ ಡ್ರುಕ್ (ಬ್ಯಾಂಕಿನ ಅಂತರಾಷ್ಟ್ರೀಯ ಅಂಗಸಂಸ್ಥೆ) ಯೊಂದಿಗೆ ದ್ವಿಪಕ್ಷೀಯ ಎಟಿಎಂ ಹಂಚಿಕೆ ವ್ಯವಸ್ಥೆಯನ್ನು ನಿರ್ವಹಿಸುತ್ತಿದೆ ಎಂದು ಆರ್‌ಬಿಐ ಗಮನಿಸಿದೆ ಎಂದು ಅದು ಹೇಳಿದೆ

2007ರ ಪಿಎಸ್ಎಸ್ ಕಾಯ್ದೆಯ ಸೆಕ್ಷನ್ 26 (6) ರಲ್ಲಿ ಉಲ್ಲೇಖಿಸಲಾದ ನಿಯಮದ ಉಲ್ಲಂಘನೆಗಾಗಿ ಆರ್ಬಿಐ 1 ಕೋಟಿ ರೂ.ದಂಡ ಕಟ್ಟುವಂತೆ ಪಿಎನ್ ಬಿಗೆ ಸೂಚಿಸಿದೆ.

ಇದೇ ವೇಳೆ ಪ್ರಿಪೇಯ್ಡ್ ಪಾವತಿ ವಿತರಣೆ ಮತ್ತು ಕಾರ್ಯಾಚರಣೆಯಲ್ಲಿ ತೊಡಗಿರುವ ಐದು ಪಾವತಿ ವ್ಯವಸ್ಥೆ ಆಪರೇಟರ್‌ಗಳ (ಪಿಎಸ್‌ಒ) ಪ್ರಮಾಣಪತ್ರ (ಸಿಒಎ) ವನ್ನು ರದ್ದುಗೊಳಿಸಿದೆ ಎಂದು ಆರ್‌ಬಿಐ ಹೇಳಿಕೆಯಲ್ಲಿ ತಿಳಿಸಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು