ಪ್ರತಿಷ್ಠಿತ ಬ್ಯಾಂಕ್ ನ ಲೈಸನ್ಸ್ ಕ್ಯಾನ್ಸಲ್ ಮಾಡಿದ ಆರ್ ಬಿಐ| ಆತಂಕದಲ್ಲಿ ಠೇವಣಿದಾರರು

currency
Share on facebook
Share on twitter
Share on linkedin
Share on whatsapp
Share on telegram
Share on email
Share on print

ಮುಂಬೈ(09-12-2020): ಮಹಾರಾಷ್ಟ್ರದ ಕರದ್ ಜನತಾ ಸಹಕರಿ ಬ್ಯಾಂಕ್ ಲಿಮಿಟೆಡ್‌ನಲ್ಲಿ ಸಾಕಷ್ಟು ಬಂಡವಾಳ ಗಳಿಕೆಯ ನಿರೀಕ್ಷೆಯಿಲ್ಲದ ಕಾರಣ ಬ್ಯಾಂಕ್ ನ  ಪರವಾನಗಿಯನ್ನು ರದ್ದುಪಡಿಸಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.

ಶೇ .99 ಕ್ಕಿಂತ ಹೆಚ್ಚು ಠೇವಣಿದಾರರು ತಮ್ಮ ಠೇವಣಿಗಳ ಸಂಪೂರ್ಣ ಪಾವತಿಯನ್ನು ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಶನ್‌ನಿಂದ (ಡಿಐಜಿಸಿ) ಪಡೆಯುತ್ತಾರೆ ಎಂದು ಆರ್‌ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.

ಪರವಾನಗಿ ರದ್ದತಿ ಮತ್ತು ದಿವಾಳಿ ಪ್ರಕ್ರಿಯೆಗಳ ಬಳಿಕ, ಕರದ್ ಜನತಾ ಸಹಕಾರಿ ಬ್ಯಾಂಕಿನ ಠೇವಣಿದಾರರಿಗೆ ಪಾವತಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗುವುದು.

ದಿವಾಳಿಯಾದ ಮೇಲೆ, ಪ್ರತಿ ಠೇವಣಿದಾರರು ತಮ್ಮ ಠೇವಣಿಗಳನ್ನು 5 ಲಕ್ಷದವರೆಗೆ ಡಿಐಜಿಸಿಯಿಂದ ಪಡೆಯಲು ಅರ್ಹರಾಗಿರುತ್ತಾರೆ.

ಡಿಸೆಂಬರ್ 7 ರಂದು ವ್ಯವಹಾರದ ಕೊನೆಯ ದಿನವಾಗಿತ್ತು. ಆ ಬಳಿಕ ಠೇವಣಿ ತೆಗೆದುಕೊಳ್ಳುವುದು ಮತ್ತು ಠೇವಣಿಗಳನ್ನು ಮರುಪಾವತಿ ಮಾಡುವುದಕ್ಕೆ ನಿರ್ಬಂಧ ವಿಧಿಸಲಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು