ರಾಯ್ಪುರ (22-12-2020): ಒಂದೇ ಕುಟುಂಬದ ನಾಲ್ವರ ಮೃತದೇಹ ವಾಟರ್ ಟ್ಯಾಂಕ್ ನಲ್ಲಿ ಪತ್ತೆಯಾಗಿರುವ ಘಟನೆ ಚತ್ತೀಸ್ ಗಢದ ದರ್ಗ್ ಜಿಲ್ಲೆಯಲ್ಲಿ ನಡೆದಿದೆ.
ದರ್ಗ್ ಜಿಲ್ಲೆಯ ಅಮಲೇಶ್ವರ ಖುದ್ಮುಡಾ ಗ್ರಾಮದ ನಿವಾಸಿಗಳಾದ ಬಾಲರಾಜ್ ಸೋಂಕರ್ (60), ಪತ್ನಿ ದುಲಾರಿನ್ ಬಾಯಿ (55), ಪುತ್ರ ರೋಹಿತ್ (30) ಮತ್ತು ಸೊಸೆ ಕೀರ್ತಿ ಅವರ ಮೃತದೇಹ ವಾಟರ್ ಟ್ಯಾಂಕ್ ನಲ್ಲಿ ಸಿಕ್ಕಿದೆ. ಇವರು ರೈತರಾಗಿದ್ದು ಜಮೀನಿನಲ್ಲಿ ದುಡಿದು ಗುಡಿಸಲು ಮಾಡಿಕೊಂಡು ವಾಸಿಸುತ್ತಿದ್ದರು.
ಇನ್ನು ಗುಡಿಸಲಿನಲ್ಲಿ ರೋಹಿತ್ ನ 11 ವರ್ಷದ ಪುತ್ರ ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಕುರಿತು ಅಮಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಾಥಮಿಕವಾಗಿ ಕೊಲೆ ಶಂಕೆ ವ್ಯಕ್ತವಾಗಿದ್ದು, ಈ ಕುರಿತು ಪೊಲೀಸರು ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.