ಮೋದಿ ಭಾರತದ ಭೂಪ್ರದೇಶದ ಒಂದು ಭಾಗವನ್ನು ಚೀನಾಕ್ಕೆ ಬಿಟ್ಟುಕೊಟ್ಟಿದ್ದಾರೆ-ಗಂಭೀರ ಆರೋಪ ಮಾಡಿದ ರಾಹುಲ್ ಗಾಂಧಿ

raulgandhi
Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ(12-02-2021): ಲಡಾಖ್ ಬಗೆಗಿನ ಪ್ರಧಾನಿ ನಿಲುವಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಶುಕ್ರವಾರ ನರೇಂದ್ರ ಮೋದಿಯವರ ಮೇಲೆ ತೀವ್ರ ವಾಗ್ಧಾಳಿ ನಡೆಸಿದ್ದಾರೆ. ಪ್ರಧಾನಿ ಭಾರತದ ಭೂಪ್ರದೇಶದ ಒಂದು ಭಾಗವನ್ನು ಚೀನಾಕ್ಕೆ ಬಿಟ್ಟುಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್, ಚೀನಾದ ವಿರುದ್ಧ ದೃಢವಾಗಿ ಪ್ರಧಾನಿ ನಿಲ್ಲುತ್ತಿಲ್ಲ. ಅವರು ನಮ್ಮ ಸೈನ್ಯದ ತ್ಯಾಗಕ್ಕೆ ದ್ರೋಹ ಬಗೆಯುತ್ತಿದ್ದಾರೆ. ಭಾರತದಲ್ಲಿ ಯಾರಿಗೂ ಇದನ್ನು ಮಾಡಲು ಅನುಮತಿಸಬಾರದು. ಈಗ, ನಮ್ಮ ಸೈನ್ಯವು ಫಿಂಗರ್ 3 ರಲ್ಲಿ ಬೀಡುಬಿಡಲಿದೆ ಎಂದು ನಾವು ಕಂಡುಕೊಂಡಿದ್ದೇವೆ. ಫಿಂಗರ್ 4 ನಮ್ಮ ಪ್ರದೇಶವಾಗಿದೆ. ಈಗ ನಾವು ಫಿಂಗರ್ 4 ರಿಂದ ಫಿಂಗರ್ 3 ಗೆ ಸ್ಥಳಾಂತರಗೊಂಡಿದ್ದೇವೆ. ಮೋದಿ ನಮ್ಮ ಪ್ರದೇಶವನ್ನು ಚೀನಿಯರಿಗೆ ಏಕೆ ಬಿಟ್ಟುಕೊಟ್ಟಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

ಪೂರ್ವ ಲಡಾಕ್‌ನ ಪರಿಸ್ಥಿತಿ ಕುರಿತು ಗುರುವಾರ ರಾಜನಾಥ್ ಸಿಂಗ್ ಹೇಳಿಕೆ ನೀಡಿದ್ದಾರೆ. ರಕ್ಷಣಾ ಸಚಿವರು ಚೀನಾ ಪ್ರವೇಶಿಸಿದ ಪ್ರಮುಖ ಪ್ರದೇಶವಾದ ಡೆಪ್ಸಾಂಗ್ ಬಯಲು ಪ್ರದೇಶದ ಬಗ್ಗೆ ಒಂದು ಮಾತನ್ನೂ ಮಾತನಾಡಲಿಲ್ಲ. ಸತ್ಯವೆಂದರೆ ಪ್ರಧಾನಿ ಭಾರತದ ಭೂಪ್ರದೇಶವನ್ನು ಚೀನಾಕ್ಕೆ ಬಿಟ್ಟುಕೊಟ್ಟಿದ್ದಾರೆ. ಅವರು ದೇಶಕ್ಕೆ ಉತ್ತರಿಸಬೇಕು ಎಂದು ಗಾಂಧಿ ಹೇಳಿದರು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು