ನವದೆಹಲಿ(03-02-2021): ಬಹುತೇಕ ಸರ್ವಾಧಿಕಾರಿಗಳ ಹೆಸರು ಎಂ(m) ನಿಂದ ಯಾಕೆ ಪ್ರಾರಂಭವಾಗುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ನಲ್ಲಿ ಪ್ರಶ್ನಿಸಿದ್ದಾರೆ.
ಭಾರತವನ್ನು ಸರ್ವಾಧಿಕಾರಿ ಮೋದಿ ಆಡಳಿತ ನಡೆಸುತ್ತಿದ್ದಾರೆ ಎನ್ನುವ ಪರೋಕ್ಷವಾದ ವಾದವನ್ನು ಬಲಪಡಿಸಿ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಮಾರ್ಕೋಸ್, ಮುಸ್ಸೋಲಿನಿ, ಮಿಲೊಸೆವಿಕ್, ಮುಬಾರಕ್, ಮೊಬುಟು, ಮುಷರಫ್, ಮೈಕಾಂಬೆರೊ ಇವರು ಜಗತ್ತು ಕಂಡ ಅತಿದೊಡ್ಡ ಸರ್ವಾಧಿಕಾರಿಗಳಾಗಿದ್ದಾರೆ. ಇವರನ್ನು ಉಲ್ಲೇಖಿಸಿ ರಾಹುಲ್ ಗಾಂಧಿ ಪರೋಕ್ಷವಾಗಿ ಮೋದಿಗೆ ಟಾಂಗ್ ನೀಡಿದ್ದಾರೆ.
ಕೃಷಿ ಕಾಯ್ದೆ, ಎನ್ ಆರ್ ಸಿ, ನೋಟು ಬ್ಯಾನ್, ಬ್ಯಾಂಕ್ ಗಳ ವಿಲೀನ ಸೇರಿದಂತೆ ಕೇಂದ್ರದ ಮೋದಿ ಸರಕಾರ ಏಕಪಕ್ಷೀಯ ನಿರ್ಧಾರವನ್ನು ಈ ಮೊದಲು ತೆಗೆದುಕೊಂಡಿದೆ. ಈ ಬಗ್ಗೆ ವಿಪಕ್ಷಗಳು ಮತ್ತು ಬುದ್ದಿ ಜೀವಿಗಳು ಮೋದಿಯನ್ನು ಟೀಕಿಸುತ್ತಾ, ಸರ್ವಾಧಿಕಾರಿ ಎಂದು ಈ ಮೊದಲು ಹಲವು ಬಾರಿ ಟೀಕಿಸಿದ್ದವು.