ಉತ್ತರ ಪ್ರದೇಶ(05-11-2020): ಉತ್ತರ ಪ್ರದೇಶದ ಮುಜಪ್ಪರ್ ನಗರ ಮೂಲದ ಗ್ಯಾಂಗ್ ತಮ್ಮ ರೌಡಿಸಂ ಸೇವೆಗಳಿಗೆ ದರವನ್ನು ಬಿಡುಗಡೆ ಮಾಡಿದೆ. ಹಣಕ್ಕಾಗಿ ಜನರನ್ನು ಥಳಿಸಬಹುದು ಅಥವಾ ಕೊಲ್ಲಬಹುದು ಎಂದು ರೇಟ್ ಫಿಕ್ಸ್ ಮಾಡಿರುವ ಬಗ್ಗೆ ಇದೀಗ ವೈರಲ್ ಆಗಿದೆ.
ರೌಡಿಗಳು ಗ್ಯಾಂಗ್ ದರದ ಚಾರ್ಟ್ ನ್ನು ಹಾಕಿದ್ದರು, ಅಲ್ಲಿ ಅವರು ಭೀಕರ ಅಪರಾಧವನ್ನು ಮಾಡಲು ಜನರಿಗೆ ಒದಗಿಸುತ್ತಿರುವ ಗೂಂಡಾ ಸೇವೆಗಳ ದರವನ್ನು ಉಲ್ಲೇಖಿಸಿದ್ದಾರೆ.
ಈ ಕುರಿತು ಯುವಜನರು ಸಾಮಾಜಿಕ ಮಾಧ್ಯಮಗಳಲ್ಲಿ ಚಿತ್ರಗಳನ್ನು ಅಪ್ಲೋಡ್ ಮಾಡಿದ್ದಾರೆ. ಚಿತ್ರವೊಂದರಲ್ಲಿ, ವ್ಯಕ್ತಿಯೋರ್ವ ಪಿಸ್ತೂಲ್ ಹಿಡಿದಿರುವುದನ್ನು ಕಾಣಬಹುದು.
ಯುಪಿ ಮೂಲದ ಗ್ಯಾಂಗ್ ಜನರನ್ನು ಥಳಿಸುವುದರಿಂದ ಹಿಡಿದು ಅವರನ್ನು ಕೊಲ್ಲುವವರೆಗಿನ ಅಪರಾಧವನ್ನು ಮಾಡಲು ರೇಟ್ ಫಿಕ್ಸ್ ಮಾಡಲಾಗಿದೆ.
ಮುಝಪ್ಪರ್ ನಗರದ ಗ್ಯಾಂಗ್ ಹಣಕ್ಕಾಗಿ ಮಾತ್ರ ಜಗಳವಾಡಲು ಅಥವಾ ಜನರನ್ನು ಗಾಯಗೊಳಿಸಲು ಸಿದ್ಧವಾಗಿತ್ತು.
ಚಾರ್ಟ್ ಪ್ರಕಾರ, ಈ ಮೊತ್ತವು 10,000-55,000ದವರೆಗಿತ್ತು. ಬೆದರಿಕೆ ಹಾಕಲು ಗ್ಯಾಂಗ್ 10,000,
ಜನರನ್ನು ಥಳಿಸಲು 5,000,
ಗಾಯಗೊಳಿಸಲು 10,000 ಮತ್ತು ಕೊಲೆಗೆ 55,000 ಶುಲ್ಕ ವಿಧಿಸಲಾಗಿದೆ.