ಬಾಲಕಿಯ ಕಿಡ್ನಾಪ್, ಕೋಳಿ ಫಾರ್ಮ್ ನಲ್ಲಿ ಕೂಡಿಟ್ಟು ನಿರಂತರ ರೇಪ್

victim
Share on facebook
Share on twitter
Share on linkedin
Share on whatsapp
Share on telegram
Share on email
Share on print

ಕಟಕ್(15-10-2020): ಒಡಿಶಾದ ಕಟಕ್‌ನಲ್ಲಿ ಬಾಲಕಿಯನ್ನು ಕಿಡ್ನಾಪ್ ಮಾಡಿ, ಕೋಳಿ ಪಾರ್ಮ್ ನಲ್ಲಿ ಕೂಡಿಟ್ಟು ನಿರಂತರವಾಗಿ ಅತ್ಯಾಚಾರ ಮಾಡಿರುವ ಘಟನೆ  ನಡೆದಿದೆ

17 ವರ್ಷದ ಬಾಲಕಿ ಮೇಲೆ 22 ದಿನಗಳ ಕಾಲ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಗತ್ಸಿಂಗ್‌ಪುರ ಜಿಲ್ಲೆಯ ಟಿರ್ಟೋಲ್ ಮೂಲದ ಬಾಲಕಿ ಕಳೆದ ತಿಂಗಳು ತನ್ನ ಹೆತ್ತವರೊಂದಿಗೆ ಜಗಳವಾಡಿ ಮನೆಯಿಂದ ಓಡಿಹೋಗಿದ್ದಳು. ಮನೆಗೆ ಮರಳಲು ಕಟಕ್‌ನ ಒಎಂಪಿ ಸ್ಕ್ವೇರ್‌ನಲ್ಲಿ ಬಸ್ ಹತ್ತಲು ಬಾಲಕಿ ಕಾಯುತ್ತಿದ್ದಾಗ, ಆರೋಪಿ ಮೋಟಾರ್‌ಸೈಕಲ್‌ನಲ್ಲಿ ಬಂದು ಬಾಲಕಿಯನ್ನು ಅಪಹರಿಸಿದ್ದಾನೆ.

ಬಳಿಕ ಕೋಳಿ ಪಾರ್ಮ್ ಗೆ ಕರೆದುಕೊಂಡು ಹೋಗಿ ಕೂಡಿ ಹಾಕಿ ಪದೇ ಪದೇ ಅತ್ಯಾಚಾರ ಮಾಡಿದ್ದಾರೆ ಎಂದು ಸಂತ್ರಸ್ತೆ ಹೇಳಿದ್ದಾರೆ.

ಜಮೀನಿನಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿದೆ ಎಂದು ಶಂಕಿಸಿ ಕೆಲವು ಸ್ಥಳೀಯರು ಪೊಲೀಸರಿಗೆ ತಿಳಿಸಿದ ಬಳಿಕ ಪೊಲೀಸರು ದಾಳಿ ನಡೆಸಿದ್ದು, ಬಾಲಕಿಯನ್ನು ರಕ್ಷಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಓರ್ವನನ್ನು ಬಂಧಿಸಲಾಗಿದೆ. ಇನ್ನೋರ್ವ ಪರಾರಿಯಾಗಿದ್ದ ಆತನ ಹುಡುಕಾಟ ಮುಂದುವರಿದಿದೆ ಎಂದು ಕಟಕ್ ನಗರದ ಪೊಲೀಸ್ ಉಪ ಆಯುಕ್ತ ಪ್ರತೀಕ್ ಸಿಂಗ್ ಹೇಳಿದ್ದಾರೆ.

ನಂತರ ಬಾಲಕಿಯನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯುಸಿ) ಮುಂದೆ ಹಾಜರುಪಡಿಸಿ ಅಲ್ಲಿಂದ ಅನಾಥಾಶ್ರಮಕ್ಕೆ ಕಳುಹಿಸಲಾಗಿದೆ ಎಂದು ಅವರು ಹೇಳಿದರು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು