ಚಿತ್ರದುರ್ಗ(1-10-20): ಮನಿಷಾಳ ಸಾಮೂಹಿಕ ಅತ್ಯಾಚ್ಯಾರ ಹಾಗೂ ಕೊಲೆಗೆ ಸಂಬಂದಿಸಿದಂತೆ ನೇರ ಹೊಣೆಯನ್ನು ಹೊತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ಮೃತ ಮನಿಷಾಳ ಕುಟುಂಬಕ್ಕೆ ಯುಪಿ ಸರ್ಕಾರ 1 ಕೋಟಿ ರೂಗಳನ್ನು ಪರಿಹಾರವಾಗಿ ನೀಡಬೇಕು ಮತ್ತು ಕುಟುಂಬದ ಎರಡು ಜನ ಸದಸ್ಯರಿಗೆ ಸರ್ಕಾರಿ ನೌಕರಿಯನ್ನು ನೀಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಚಿತ್ರದುರ್ಗ ಜಿಲ್ಲಾ ಸಂಚಾಲಕ ಕೆಂಗುಂಟೆ ಜಯ್ಯಪ್ಪ ಅಗ್ರಹಿಸಿದ್ದಾರೆ.
ಉತ್ತರ ಪ್ರದೇಶದ ಹುತ್ರಾಸ್ ನಗರದ ನಿವಾಸಿಯಾದ ವಾಲ್ಮಿಕಿ ಜನಾಂಗಕ್ಕೆ ಸೇರಿದ 19 ವರ್ಷದ ಮನಿಷಾ ಎಂಬ ಯುವತಿಯ ಮೇಲೆ ನಾಲ್ಕು ಜನ ಸವರ್ಣಿಯ ಯುವಕರು ಅತ್ಯಾಚಾರ ನಡೆಸಿದ್ದಾರೆ. ಕ್ರೂರವಾಗಿ ಕೊಲೆ ಮಾಡಿರುವುದನ್ನು ಖಂಡಿಸಿ ಕಾಮುಕರನ್ನು ಗಲ್ಲಿಗೇರಿಸುವಂತೆ ಆಗ್ರಹಿಸಿ ಇಂದು ಹೊಳಲ್ಕೆರೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು.
ಉತ್ತರ ಪ್ರದೇಶದಲ್ಲಿ ದಲಿತರಿಗೆ ರಕ್ಷಣೆ ಇಲ್ಲದಂತಾಗಿದೆ. ದಲಿತ ವರ್ಗಕ್ಕೆ ಸೇರಿದ ಮನಿಷಾಳನ್ನು ಸೆಪ್ಟಂಬರ್ 14 ರಂದು ಕ್ರೂರವಾಗಿ ನಾಲ್ಕು ಜನ ಯುವಕರು ಸಾಮೂಹಿಕವಾಗಿ ಅತ್ಯಾಚಾರ ನಡೆಸಿ ಅವಳ ನಾಲಗೆಯನ್ನು ಕತ್ತರಿಸಿ ಬೆನ್ನುಮೂಳೆಯನ್ನು ಮುರಿದು ಪೈಶಾಚಿಕ ಕೃತ್ಯ ಎಸಗಿದ್ದರೂ ಯುಪಿ ಸರ್ಕಾರ ಕಣ್ಮುಚ್ಚಿ ಕುಳಿತಿದೆ ಈ ಪ್ರಕರಣದ ನೇರ ಹೊಣೆಯನ್ನು ಹೊತ್ತು ಯುಪಿ ಸರ್ಕಾರದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜೀನಾಮೆಯನ್ನು ನೀಡಬೇಕು ಇಲ್ಲದಿದ್ದರೆ ಪ್ರತಿಭಟನೆಯು ಉಗ್ರ ಸ್ವರೂಪ ತಾಳುತ್ತದೆ ಎಂದು ಜಿಲ್ಲಾ ಸಂಚಾಲಕರಾದ ಕೆಂಗುಂಟೆ ಜಯ್ಯಪ್ಪ ಆಕ್ರೋಷವನ್ನು ವ್ಯಕ್ತಪಡಿಸಿದರು.
ಇದೇ ವೇಳೆ ಮನಿಷಾಳ ಕುಟುಂಬದ ಎರಡು ಜನ ಸದಸ್ಯರಿಗೆ ಸರ್ಕಾರಿ ನೌಕರಿಯನ್ನು ನೀಡಬೇಕು ಎಂದು ಹಕ್ಕೋತ್ತಾಯಗಳನ್ನು ಮಂಡಿಸುತ್ತಾ ತಹಸೀಲ್ದಾರ್ ಮುಖಾಂತರ ರಾಜ್ಯಪಾಲರಿಗೆ ಮನವಿಯನ್ನು ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರಾದ ಕೆಂಗುಂಟೆ ಜಯ್ಯಪ್ಪ , ತಾಲೂಕು ಸಂಚಾಲಕರಾದ ಪ್ರಸನ್ನಕುಮಾರ್ ದಾಸಿಕಟ್ಟೆ . ಜಿಲ್ಲಾ ಸಂಘಟನ ಸಂಚಾಲಕರುಗಳಾದ ದಿವಾಕರ್ , ಜಿ ಶಿವಪ್ಪ , ಮಂಜಪ್ಪ ವಿಶ್ವನಾಥನಹಳ್ಳಿ , ತಾಲೂಕು ಪದಾಧಿಕಾರಿಗಳಾದ ಶ್ರೀನಿವಾಸ್ , ಮಂಜುನಾಥ್ ಉಡುಗೋರೆ ,ರಮೇಶ್ ದುಮ್ಮಿ , ಪ್ರಕಾಶ್ ರಂಗಾಪುರ , ಮಂಜು ಎಮ್ಮಿಗನೂರು ,ತಿಪ್ಪೇಸ್ವಾಮಿ , ನಿಂಗರಾಜ್ ,ವಿಜಯ್ ಕುಮಾರ್, ವಿಜಯ್ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.