ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡುತ್ತೇನೆ : ಇಂದು 3ನೇ ವಿಡಿಯೋದಲ್ಲಿ ಯುವತಿ ಹೇಳಿಕೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ರಮೇಶ್ ಜಾರಕಿಹೊಳಿ ವಿರುದ್ಧದ ಸಿಡಿ ಹಗರಣ ಸಂಬಂಧ ಎನ್ನಲಾದ ಯುವತಿ ಇಂದು ಮತ್ತೊಂದು ಮೂರನೇ ವಿಡಿಯೋ ಬಿಡುಗಡೆ ಮಾಡುವ ಮೂಲಕ ಸಿಡಿ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ.

ನನ್ನ ಮೇಲೆ ಕರ್ನಾಟಕದ ಜನತೆ ಹಾಗೂ ಎಲ್ಲಾ ತಂದೆ-ತಾಯಿಯ ಆಶೀರ್ವಾದ ಇರಲಿ ನನಗೆ ಎಲ್ಲಾ ಪಕ್ಷದವರು ಹಾಗೂ ಎಲ್ಲಾ ಸಂಘಟನೆಗಳು ಬೆಂಬಲ ನೀಡುತ್ತಿದ್ದಾರೆ. ಹೀಗಾಗಿ ನನಗೆ ಧೈರ್ಯ ಬಂದಿದೆ, ಆ ಒಂದು ಧೈರ್ಯದಿಂದಲೇ ನಾನು ಇಂದು ದೂರು ಕೊಡಲು ನಿರ್ಧರಿಸಿದ್ದೇನೆ.

24 ದಿನದಿಂದ ನನಗೆ ಜೀವ ಭಯದಿಂದ ಬೆದರಿಕೆಯಲ್ಲಿ ಇದ್ದೇನೆ, ಈಗ ನನ್ನನ್ನು ಎಲ್ಲರೂ ಬೆಂಬಲಸ್ತಿದ್ದೀರಾ, ಆ ಒಂದೇ ಕಾರಣಕ್ಕೆ ನನಗೆ ಧೈರ್ಯ ಬಂದಿದೆ, ನನ್ನ ವಕೀಲ ಜಗದೀಶ್ ಅವರ ಮೂಲಕ ರಮೇಶ್ ಜಾರಕಿಹೊಳಿ ವಿರುದ್ಧ ದೂರು ದಾಖಲಿಸಿದ್ದೇನೆ ಎಂದು ಮೂರನೇ ವಿಡಿಯೋದಲ್ಲಿ ಸಿಡಿ ಲೇಡಿ ಹೇಳಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು