ರಮೇಶ್ ಜಾರಕಿಹೊಳಿ ಸಿಡಿಗೆ ಹೊಸ ಟ್ವಿಸ್ಟ್ ನೀಡಿದ ಕುಮಾರಸ್ವಾಮಿ

kumaraswamy
Share on facebook
Share on twitter
Share on linkedin
Share on whatsapp
Share on telegram
Share on email
Share on print

ಮೈಸೂರು: ರಮೇಶ್ ಜಾರಕಿಹೊಳಿ ಕೇಸ್ ಗೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೊಸ ಟ್ವಿಸ್ಟ್ ನೀಡಿದ್ದು,  ರಮೇಶ್ ಜಾರಕಿಹೊಳಿ ಸಿಡಿಗೆ ಸಂಬಂಧಿಸಿದಂತೆ  ಕಳೆದ 3 ತಿಂಗಳಿನಿಂದ ಡೀಲ್ ನಡೆದಿದೆ. 5 ಕೋಟಿ ರೂಪಾಯಿ ಡೀಲ್ ನಡೆದಿದ್ದು, ಈ ಕೇಸ್ ನಲ್ಲಿ ದೊಡ್ಡ ದೊಡ್ಡವರೇ ಇದ್ದಾರೆ ಎಂದು ಅವರು ಹೇಳಿದ್ದಾರೆ.

ಮೈಸೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು,  ರಮೇಶ್ ಜಾರಕಿಹೊಳಿಯನ್ನು ಮಂತ್ರಿಸ್ಥಾನಕ್ಕೆ ರಾಜೀನಾಮೆ ಕೊಡಿಸುವುದು ಈ ಸಿಡಿಯ ಮುಖ್ಯ ಉದ್ದೇಶವಾಗಿತ್ತು.  ಇದರಲ್ಲಿ ಅವರು ಸಫಲರಾಗಿದ್ದಾರೆ.  ರಮೇಶ್ ಜಾರಕಿಹೊಳಿ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಯುವತಿ ಹಾಗೂ ಈಗ ಮಂತ್ರಿಯಾಗಿರುವ ವ್ಯಕ್ತಿಗಳಿಬ್ಬರು ಸೇರಿಕೊಂಡು ಈ ವಿಡಿಯೋವನ್ನು ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಸಿಡಿ ಇದೆ ಎಂದು ವ್ಯಕ್ತಿಯೊಬ್ಬ ಬಹಿರಂಗವಾಗಿ ಹೇಳಿಕೆ ನೀಡಿದ್ದಾನೆ ಅವನನ್ನು ಮೊದಲು ಅರೆಸ್ಟ್ ಮಾಡಬೇಕು. ಆತ 4 ಸಿಡಿ ಇದೆ ಎಂದು ಹೇಳಿದ್ದಾನೆ. ಹಣಕ್ಕಾಗಿ ಇಂತಹ ಬ್ಲ್ಯಾಕ್ ಮೇಲ್ ಮಾಡುವವರು ಹೆಚ್ಚಾಗಿದ್ದಾರೆ. ಖಾಸಗಿ ಜೀವನವನ್ನು ಸಾರ್ವಜನಿಕವಾಗಿ ತರುವುದನ್ನು ಮಾಧ್ಯಮಗಳಲ್ಲಿ ನಾನು ನೋಡಿದ್ದೇನೆ. ಮೊದಲು ಅಂತವರನ್ನು ಬಂಧಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು