ಬೆಂಗಳೂರು: ಮಾ.13: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಉದ್ಯೋಗದ ಆಮಿಷವೊಡ್ಡಿ ನನಗೆ ವಂಚನೆ ಮಾಡಿದ್ದಾರೆ ಎಂದು ಸಂತ್ರಸ್ತೆ ಯುವತಿ ಗಂಭೀರ ಆರೋಪ ಮಾಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಡಿಯಲ್ಲಿರುವುದು ಎನ್ನಲಾದ ಯುವತಿ ಮೊಲದ ಬಾರಿಗೆ ವಿಡಿಯೊ ಬಿಡುಗಡೆಗೊಳಿಸಿ ಪ್ರತಿಕ್ರಿಯಿಸಿದ್ದು, ನನಗೆ ಯಾವುದೇ ರಾಜಕೀಯ ನಾಯಕರ ಬೆಂಬಲವಿಲ್ಲ. ಈ ವಿಡಿಯೊದಿಂದ ನನ್ನ ಮಾನ ಮರ್ಯಾದೆ ಬೀದಿ ಪಾಲಾಗಿದೆ, ರಮೇಶ್ ಜಾರಕಿಹೊಳಿ ಅವರೇ ವೀಡಿಯೊ ಬಿಡುಗಡೆ ಮಾಡಿದ್ದಾರೆ ಎಂದು ದೂರಿದ್ದಾರೆ.
ನನ್ನ ತಂದೆ ತಾಯಿ 2 ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನಾನು ಕೂಡ ಹಲವಾರು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದೇನೆ ಎಂದಿರುವ ಆಕೆ, ವಿಡಿಯೊ ಹೇಗೆ ಮಾಡಿದ್ದು ಎಂಬುವುದು ಗೊತ್ತಿಲ್ಲ. ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ನನ್ನ ಕುಟುಂಬಕ್ಕೆ ರಕ್ಷಣೆ ಒದಗಿಸುವಂತೆ ವಿಡಿಯೋ ಮೂಲಕ ಕೋರಿದ್ದಾರೆ.