ಲಕ್ನೋ; (13/10/2020); ಆನೆಯ ಮೇಲೆ ಕುಳಿತು ಯೋಗ ಮಾಡಲು ಹೋಗಿ ಯೋಗ ಗುರು ರಾಮ್ ದೇವ್ ನೆಲದ ಮೇಲೆ ಬಿದ್ದಿರುವ ಘಟನೆ ನಡೆದಿದೆ. ಈ ಸಂಬಂಧ ವಿಡಿಯೋ ಒಂದು ಸಾಮಾಜಿಕ ತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಛೀಮಾರಿಗೆ ಕಾರಣವಾಗಿದೆ.
ರಾಮ್ ದೇವ್ ಆನೆಯ ಮೇಲೆ ಯೋಗ ಮಾಡುವ ಸಾಹಸ ಮಾಡುತ್ತಾರೆ. ಆದರೆ, ಆನೆಯು ಕಿರಿಕಿರಿಯಾಗಿ ಕಾಲನ್ನು ಕೊಡವಿದ ಪರಿಣಾಮ ರಾಮ್ ದೇವ್ ದೊಪ್ಪನೆ ನೆಲಕ್ಕೆ ಬಿದ್ದಿದ್ದಾರೆ. ತಕ್ಷಣವೇ ಅವರ ಭದ್ರತಾ ಸಿಬ್ಬಂದಿ ಅವರ ನೆರವಿಗೆ ಧಾವಿಸಿದ್ದಾರೆ.
ಈ ವಿಡಿಯೋ ಸೋಷಿಯಲ್ ಮೀಡಿಯದಲ್ಲಿ ವೈರಲ್ ಆಗುತ್ತಿದ್ದಂತೆ ಅನೇಕರ ವ್ಯಂಗ್ಯ, ಟೀಕೆಗೆ ಕಾರಣವಾಗಿದೆ.