ರಾಮಮಂದಿರ ಕಟ್ಟಲು ದೇಣಿಗೆ ನೀಡಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಸಾವಿರಾರು ಚೆಕ್ಕುಗಳು ಬೌನ್ಸ್!

Share on facebook
Share on twitter
Share on linkedin
Share on whatsapp
Share on telegram
Share on email
Share on print

ಲಕ್ನೋ: ರಾಮಮಂದಿರ ಕಟ್ಟಲೆಂದು ದೇಣಿಗೆಯಾಗಿ ಬಂದಿದ್ದ ಚೆಕ್ಕುಗಳು ಬೌನ್ಸ್ ಆಗಿರುವ ಬಗ್ಗೆ ವರದಿಯಾಗಿದೆ. ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಲೆಕ್ಕ ಪರಿಶೋಧನಾ ವರದಿಯಲ್ಲಿ ಅಂಶವು ಬೆಳಕಿಗೆ ಬಂದಿದೆ.

ಸುಮಾರು 15000 ದಷ್ಟು ಚೆಕ್ಕುಗಳು ಬೌನ್ಸ್ ಆಗಿದ್ದು, ಇವೆಲ್ಲಾ ಸೇರಿದರೆ ಸುಮಾರು 22 ಕೋಟಿ ರೂಪಾಯಿ ಮೌಲ್ಯವನ್ನು ಹೊಂದಿದೆ ಎನ್ನಲಾಗಿದೆ.

ಬೌನ್ಸ್ ಆಗಿರುವ ಹದಿನೈದು ಸಾವಿರ ಚೆಕ್ಕುಗಳಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಚೆಕ್ಕುಗಳನ್ನು ಅಯೋಧ್ಯೆಯಲ್ಲಿಯೇ ಸಂಗ್ರಹಿಸಲಾಗಿದೆಕೆಲವು ಖಾತೆಗಳಲ್ಲಿ ಸಾಕಷ್ಟು ಹಣ ಇಲ್ಲದೇ ಹೋದ ಕಾರಣದಿಂದಾಗಿ, ಇನ್ನು ಕೆಲವು ಖಾತೆಗಳಲ್ಲಿ ಕಂಡು ಬಂದ ತಾಂತ್ರಿಕ ಸಮಸ್ಯೆಗಳ ಕಾರಣದಿಂದಾಗಿ ಬೌನ್ಸ್ ಆಗಿರುವುದೆಂದು ಅನಿಲ್ ಮಿಶ್ರಾ ಮಾಹಿತಿ ನೀಡಿದ್ದಾರೆ.

ಟ್ರಸ್ಟಿನ ಸದಸ್ಯನಾಗಿರುವ ಅನಿಲ್ ಮಿಶ್ರಾ, ಹೀಗೆ ಬೌನ್ಸ್ ಆದ ಖಾತೆದಾರರನ್ನು ನಾವು ಇನ್ನೊಮ್ಮೆ ಸಂಪರ್ಕಿಸಲಿದ್ದೇವೆ ಮತ್ತು  ದೇಣಿಗೆಯನ್ನು ಇನ್ನೊಮ್ಮೆ ಪಾವತಿಸಬೇಕೆಂದು ಮನವಿ ಮಾಡಲಿದ್ದೇವೆ ಎಂದಿದ್ದಾರೆ.

ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟಲು ಸುಪ್ರೀಮ್ ಕೋರ್ಟ್ ತೀರ್ಪು ನೀಡಿದ ಬಳಿಕ, ಇದಕ್ಕಾಗಿ ವಿಶ್ವ ಹಿಂದೂ ಪರಿಷತ್ ದೇಣಿಗೆ ಸಂಗ್ರಹಿಸುವ ಅಭಿಯಾನ ಕೈಗೊಂಡಿತ್ತು. ಜನವರಿ 15 ರಿಂದ ಫೆಬ್ರವರಿ 17 ರವರೆಗೆ ನಡೆದ ಅಭಿಯಾನದಲ್ಲಿ ಐದು ಸಾವಿರ ಕೋಟಿಗೂ ಹೆಚ್ಚು ಹಣ ಸಂಗ್ರಹಿಸಲಾಗಿದೆಯೆಂದು ವರದಿಯಾಗಿತ್ತು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು