ರಕ್ತದಾನ ಶಿಬಿರದ ಮೂಲಕ ಯುಎಇ ರಾಷ್ಟ್ರೀಯ ದಿನಾಚರಣೆ ಆಚರಿಸಿದ ದುಬೈ ಹೆಮ್ಮೆಯ ಯುಎಇ ಕನ್ನಡಿಗರು ತಂಡ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಅಬುಧಾಬಿ(06-02-2020): 65ನೇ ಕನ್ನಡ ರಾಜ್ಯೋತ್ಸವ ಮತ್ತು 49ನೇ ಯುಎಇ ರಾಷ್ಟ್ರೀಯ ದಿನಾಚರಣೆಯ ಪ್ರಯುಕ್ತ ದುಬೈ ಹೆಮ್ಮೆಯ ಯುಎಇ ಕನ್ನಡಿಗರು ವತಿಯಿಂದ ದಿನಾಂಕ 03.12.2020ರಂದು ದುಬೈಯ ಶೇಕಾ ಲತೀಫಾ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ನಡೆಯಿತು.

ಮದ್ಯಾಹ್ನ 2ರಿಂದ ಸಂಜೆ 8ರವರೆಗೆ ನಡೆದ ರಕ್ತದಾನ ಶಿಬಿರದಲ್ಲಿ ಹಲವು ರಕ್ತದಾನಿಗಳು ಪಾಲ್ಗೊಂಡರು. ರಕ್ತದಾನ ಮಾಡಿದವರಿಗೆ ಸರ್ಟಿಫಿಕೇಟ್ ನೀಡಲಾಯಿತು. ಸುಮಾರು 200ದೇಶಗಳಿಂದ ಜೀವನ ಕಟ್ಟಿಕೊಳ್ಳಲು ಸಂಯುಕ್ತ ಅರಬ್ ಸಂಸ್ಥಾನಕ್ಕೆ ಬಂದ ಅನಿವಾಸಿಗಳು ಈ ದೇಶದ ರಾಷ್ಟ್ರೀಯ ದಿನಾಚರಣೆ ಪ್ರಯುಕ್ತ ರಕ್ತದಾನ ನೀಡಿದ್ದು ಈ ಕಾಯಕ ಭೂಮಿಗೆ ನಮ್ಮಿಂದ ಸಣ್ಣ ಮಟ್ಟದ ಕಾಣಿಕೆ ಮತ್ತು ಗೌರವ ಸೂಚಕ ಎಂದು ಆಯೋಜಕರು ಸಂತಸ ವ್ಯಕ್ತಪಡಿಸಿದರು.

ರಕ್ತದಾನ ಶಿಬಿರಕ್ಕೆ ಮುಖ್ಯ ಅತಿಥಿಯಾಗಿ ಎಮ್ಸ್ಕ್ವೇರ್ ಎಂಜಿನೀರಿಂಗ್ ಕನ್ಸಲ್ಟೆಂಟ್ ಮಾಲಿಕರು ಕನ್ನಡ ಸಂಘ ಕಾರ್ಯಕ್ರಮಗಳ ಪೋಷಕರಾದ ಶ್ರೀ ಮೊಹಮ್ಮದ್ ಮುಸ್ತಫಾ ಅವರು ಆಗಮಿಸಿ ಉದ್ಘಾಟಿಸಿದರು.

ರಕ್ತದಾನ ಶಿಬಿರದ ಆಯೋಜಕರಾಗಿ ರಫೀಕಲಿ ಕೊಡಗು , ಸುದೀಪ್ ದಾವಣಗೆರೆ, ಸೆಂತಿಲ್ ಬೆಂಗಳೂರು, ಫಿರೋಜ್ ಮಂಗಳೂರು, ಮಮತಾ ಶಾರ್ಜಾ, ನಿಜಾರ್ ಕಾಸರಗೋಡು ಕನ್ನಡಿಗ, ವರದರಾಜ್ ಬೆಂಗಳೂರು, ಡಾ.ಸವಿತಾ ಮೈಸೂರು, ಪಲ್ಲವಿ ದಾವಣಗೆರೆ, ಮಮತಾ ಮೈಸೂರು, ಅಕ್ರಮ್ ಕೊಡಗು, ಯತೀಶ್ ಹಾಸನ, ಅಬ್ದುಲ್ ಹಾದಿ ಕುಂದಾಪುರ ಮುಂತಾದವರು ಒಳ್ಳೆಯ ರೀತಿಯಲ್ಲಿ ಆಯೋಜಿಸಿ ಆಸ್ಪತ್ರೆ ಸಿಬ್ಬಂದಿಗಳ ಪ್ರಶಂಸೆಗೆ ಪಾತ್ರರಾದರು. ಮುಖ್ಯ ಆಯೋಜಕರಾದ ರಫೀಕಲಿ ಕೊಡಗು ಅವರು ರಕ್ತದಾನಿಗಳಿಗೆ, ಆಸ್ಪತ್ರೆ ಸಿಬ್ಬಂದಿಗಳಿಗೆ ಮತ್ತು ಸಹ ಆಯೋಜಕರಿಗೆ ಧನ್ಯವಾದಗಳನ್ನು ತಿಳಿಸಿದರು.

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು