ನವದೆಹಲಿ(16-12-2020): ರಕ್ಷಣೆ ಕುರಿತ ಸಂಸದೀಯ ಸಮಿತಿ ಸಭೆಯಿಂದ ರಾಹುಲ್ ಗಾಂಧಿ ಹೊರ ನಡೆದಿದ್ದಾರೆಂದು ವರದಿಯಾಗಿದೆ. ಸಮಿತಿ ಅಧ್ಯಕ್ಷ ಜುವಲ್ ಓರಮ್ ನಡೆಯನ್ನು ವಿರೋಧಿಸಿ ಕಾಂಗ್ರಸ್ ನಾಯಕ ರಾಹುಲ್ ಈ ರೀತಿ ನಡೆದುಕೊಂಡಿದ್ದಾರೆ.
ಸಮಿತಿಯ ಇತರ ಸದಸ್ಯರುಗಳಾದ ರಾಜೀವ್ ಸತವ್ ಮತ್ತು ರೇವಂತ್ ರೆಡ್ಡಿ ಕೂಡಾ ರಾಹುಲ್ ಗಾಂಧಿಯನ್ನು ಹಿಂಬಾಲಿಸಿದ್ದಾರೆ. ರಾಷ್ಟ್ರೀಯ ಭದ್ರತೆಯ ಮಹತ್ವದ ವಿಚಾರದ ಬದಲು ಬರೇ ಸೈನಿಕರ ಸಮವಸ್ತ್ರದ ಬಗ್ಗೆ ಚರ್ಚಿಸಿ, ಸಮಿತಿ ಕಾಲಹರಣ ಮಾಡುತ್ತಿದೆ ಎಂದು ರಾಹುಲ್ ಆರೋಪಿಸಿದ್ದಾರೆ.
ಲಾಡಾಖಿನಲ್ಲಿ ಚೀನಾದ ಅತಿಕ್ರಮಣ ಮತ್ತು ಚೀನಾ ವಿರುದ್ಧ ಹೋರಾಡುತ್ತಿರುವ ಭಾರತೀಯ ಸಶಸ್ತ್ರ ಪಡೆಗಳನ್ನು ಬಲಪಡಿಸುವ ವಿಚಾರದಲ್ಲಿ ರಾಹುಲ್ ಮಾತನಾಡಲು ಮುಂದಾದಾಗ ಸಮಿತಿ ಅಧ್ಯಕ್ಷ ಇದಕ್ಕೆ ಅವಕಾಶ ನೀಡಿರಲಿಲ್ಲ. ಇದುವೇ ರಾಹುಲ್ ಸಭೆಯಿಂದ ಹೊರ ನಡೆಯಲು ಕಾರಣವಾಗಿದೆ.