ರೈತರಂತೆ ವೇಷತೊಟ್ಟ ಬಿಜೆಪಿ ಕಾರ್ಯಕರ್ತರಿಂದ ವಿಧ್ವಂಸಕ ಕೃತ್ಯ|  ಇಬ್ಬರು ಶಾಸಕರು 400 ಜನರನ್ನು ಕರೆತಂದಿದ್ದರೆಂಬ ಆರೋಪ!

rakesh
Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ(29-01-2021): ರೈತರಂತೆ ವೇಷತೊಟ್ಟ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಘನರಾಜ್ಯೋತ್ಸವದ ದಿನ ವಿಧ್ವಂಸಕ ಕೃತ್ಯವನ್ನು ನಡೆಸಿದ್ದಾರೆ. ಸಿಖ್ ಸಮುದಾಯದ ಜನರನ್ನು ದೇಶದ್ರೋಹಿಗಳಂತೆ ಚಿತ್ರಿಸಲು ಪ್ರಯತ್ನಿಸಿದ್ದಾರೆ ಎಂದು ಭಾರತೀಯ ಕಿಸಾನ್ ಯೂನಿಯನ್ ವಕ್ತಾರ ರಾಕೇಶ್ ಟಿಕಾಯತ್ ಆರೋಪಿಸಿದ್ದಾರೆ.

ಮಾದ್ಯಮಗಳ ಜೊತೆ ಮಾತನಾಡಿದ ರಾಕೇಶ್ ಟಿಕಾಯತ್, ಜನವರಿ 26 ರಂದು ಇಬ್ಬರು ಶಾಸಕರೊಂದಿಗೆ ಬಂದ 400 ಜನರ ತಂಡ ರೈತರ ವರ್ಚಸ್ಸನ್ನು ಹಾಳು ಮಾಡಿದ್ದಾರೆ .ಸಿಖ್ಖ್ ಜನರನ್ನು ದೇಶ ವಿರೋಧಿಗಳಂತೆ ತೋರಿಸಲು ಪ್ರಯತ್ನಿಸಿದ್ದಾರೆ ಎಂದು ಹೇಳಿದ್ದಾರೆ.

ಗಡಿಯಲ್ಲಿ ವಿದ್ಯುತ್ ಹಾಗೂ ನೀರಿನ ಪೂರೈಕೆಯನ್ನು ಕಡಿತಗೊಳಿಸಿದ ಉತ್ತರ ಪ್ರದೇಶ ಸರ್ಕಾರದ ಕ್ರಮವನ್ನು ಇದೇ ವೇಳೆ ಟಿಕಾಯತ್ ಟೀಕಿಸಿದ್ದಾರೆ. ಗಾಜಿಪುರ ಗಡಿಯನ್ನು ರೈತರು ತೊರೆಯುವುದಿಲ್ಲ. ನಮ್ಮ ಸಮಸ್ಯೆಗಳ ಹಗ್ಗೆ ಕೇಂದ್ರ ಸರ್ಕಾರದೊಂದಿಗೆ ಮಾತನಾಡುತ್ತೇವೆ. ಶಾಂತಿಯುತವಾಗಿ ಇರುವಂತೆ ಒತ್ತಾಯಿಸುತ್ತೇನೆ. ಸರ್ಕಾರದ ಜೊತೆಗಿನ ಮಾತುಕತೆ ಮುಂದುವರೆಯುತ್ತಿದೆ ಎಂದು ಟಿಕಾಯತ್ ಹೇಳಿದರು.

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು