ರಾಜ್ಯ ಸರ್ಕಾರದ ಮತ್ತೊಂದು ನಾಟಕೀಯ ಕೋವಿಡ್ ಪ್ಯಾಕೇಜ್ ಘೋಷಿಸಿದೆ: ಎಚ್.ಡಿ.ಕುಮಾರಸ್ವಾಮಿ ಕಿಡಿ

Share on facebook
Share on twitter
Share on linkedin
Share on whatsapp
Share on telegram
Share on email
Share on print

 ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯ ಹಿನ್ನೆಲೆ ಶ್ರಮಿಕ ವರ್ಗದ ಅನುಕೂಲಕ್ಕಾಗಿ ಇಂದು ರಾಜ್ಯ ಸರ್ಕಾರ ಘೋಷಿಸಿದ ಆರ್ಥಿಕ ಪ್ಯಾಕೇಜ್​ ನಾಟಕೀಯ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.

ಜನರ ಹಣ ಜನರಿಗೇ ವಾಪಸ್ಸು ಕೊಡಲು ನಿಮಗೇನು ಕಷ್ಟ? ಬಡವರಿಗೆ ಸಹಾಯ ಧನ ಒದಗಿಸಲು ಆರ್ಥಿಕ ಸಂಕಷ್ಟ ಇದ್ಯಾ? ಸರ್ಕಾರವೇನು ಬೆವರು ಸುರಿಸಿ ದುಡಿದ ಹಣವನ್ನು ಕೊಡ್ತಿದ್ಯಾ? ಎಂದು ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಸರಕಾರವನ್ನು ಕಟುವಾಗಿ ಪ್ರಶ್ನಿಸಿದ್ದಾರೆ.

ಸಿಎಂ ಯಡಿಯೂರಪ್ಪ ಘೋಷಿಸಿದ ವಿಶೇಷ ಪ್ಯಾಕೇಜ್​ ಕುರಿತು ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ರಾಜ್ಯದಲ್ಲಿ ಇರೋದು 20 ಸಾವಿರ ಹೂವು ಬೆಳೆಗಾರರು ಮಾತ್ರ ಇದ್ದಾರೆ ಎಂದು ಹೇಗೆ ಹೇಳ್ತೀರಿ. ಪ್ರತಿ ಹೆಕ್ಟೇರ್​ಗೆ 10 ಸಾವಿರ ಸಹಾಯಧನ ಅಂದ್ರೆ ಎಕರೆಗೆ ಸಿಗೋದು ಮೂರೂವರೆ ಸಾವಿರ ರೂಪಾಯಿ. ಒಂದು ಎಕರೆಯಲ್ಲಿ ಬೆಳೆ ಬಿತ್ತನೆ ಮಾಡೋಕೆ ಎಷ್ಟು ಖರ್ಚಾಗುತ್ತೆ ಎನ್ನೋದರ ಬಗ್ಗೆಯಾದರೂ ಯೋಚಿಸಬೇಕಲ್ಲವಾ? ಬೀಜ, ಗೊಬ್ಬರ, ಕೂಲಿ ಸೇರಿದಂತೆ ಎಲ್ಲದರ ಬೆಲೆ ಹೆಚ್ಚಾಗಿದೆ.

ಇವರಿಗೆ 20 ಸಾವಿರ ರೈತರ ಪಟ್ಟಿ ಕೊಟ್ಟವರ್ಯಾರು? ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಿದೆ ಈ ಪ್ಯಾಕೇಜ್​. ಇದು ಕಣ್ಣೊರೆಸುವ ತಂತ್ರ ಅಷ್ಟೆ ಎಂದು ಎಚ್‌.ಡಿ.ಕೆ. ಕಿಡಿಕಾರಿದ್ದಾರೆ. ಇದು ಅವೈಜ್ಞಾನಿಕ ಪರಿಹಾರವಾಗಿದೆ. ಇವರು ಕಾರ್ಮಿಕರಿಗೆ ಹಣ ಕೊಡುವುದಿಲ್ಲ. ಕಾರ್ಮಿಕರ ಎಫ್​ಡಿ ಹಣದಿಂದ ಕೊಡ್ತಾರೆ ಅಷ್ಟೆ. ಜನರ ಸಂಕಷ್ಟಕ್ಕೆ ಸ್ಪಂದಿಸುವ ಪ್ಯಾಕೇಜ್​ ಘೋಷಿಸಬೇಕಿತ್ತು ಎಂದು ವಿಶೇಷ ಪ್ಯಾಕೇಜ್ ಕುರಿತು ಎಚ್​ಡಿಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು