ರಾಜ್ಯದಲ್ಲಿ ಲಾಕ್ ಡೌನ್, ಸೀಲ್ ಡೌನ್ ಜಾರಿಯಿಲ್ಲ | ಜನರು ಆತಂಕ ಪಡುವ ಅಗತ್ಯ ಇಲ್ಲ.ಸರ್ಕಾರದ ಕಾರ್ಯಸೂಚಿಗಳನ್ನು ಪಾಲಿಸಿ – ಸಚಿವ ಸುಧಾಕರ್

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು : ಕಳೆದ ಹಲವು ದಿನಗಳಿಂದ ರಾಜ್ಯದಲ್ಲಿ ಕರೋನಾ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು,ರಾಜ್ಯದ ಜನತೆ ಈ ಬಾರಿಯೂ ಕೂಡ ಲಾಕ್ ಡೌನ್ ಮತ್ತು ಸೀಲ್ ಡೌನನ್ನು ಎದುರಿಸುವ ಸಂದರ್ಭ ಬರಬಹುದು ಎಂಬ ಆತಂಕದಲ್ಲಿದ್ದರು.

ಇದರ ಬಗ್ಗೆ ಆರೋಗ್ಯ ಸಚಿವ ಡಾ ಕೆ ಸುಧಾಕರ್ ಸ್ಪಷ್ಟನೆ ನೀಡಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು “ಕಳೆದ ಬಾರಿ ಕೊರೋನಾ ಅಲೆ ರಾಜ್ಯದಲ್ಲಿ ತೀವ್ರವಾಗಿತ್ತು.ಆ ಸಂದರ್ಭದಲ್ಲಿ ನಮ್ಮೊಂದಿಗೆ ಲಸಿಕೆ ಇರಲಿಲ್ಲ.ಈ ಬಾರಿ ಕೊರೋನಾ ಎರಡನೇ ಅಲ್ಪ ಮಟ್ಟಿಗೆ ಹೆಚ್ಚಾಗುತ್ತಿದ್ದರೂ ನಮ್ಮಲ್ಲಿ ಲಸಿಕೆ ಇದೆ.ಆದ್ದರಿಂದ ಜನರು ಹೆಚ್ಚು ಆತಂಕ ಪಡುವಂತಿಲ್ಲ.ಸದ್ಯಕ್ಕೆ ರಾಜ್ಯದಲ್ಲಿ ಲಾಕ್ ಡೌನ್, ಸೀಲ್ ಡೌನ್ ಜಾರಿಯಿಲ್ಲ.ಜನರು ಸರಕಾರದ ಕಾರ್ಯಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ”ಎಂದು ತಿಳಿಸಿದರು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು