ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.
ರಾಜ್ಯದಲ್ಲಿ ಇಂದು 921 ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿದ್ದು,ಮೈಸೂರು ಮೂಲದ ಓರ್ವರು ಮೃತಪಟ್ಟಿದ್ದಾರೆ.ಈ ಮೂಲಕ ಸಾವಿನ ಸಂಖ್ಯೆ 12387 ಕ್ಕೆ ತಲುಪಿದೆ.ಅದೇ ರೀತಿ ಕಳೆದ 24 ಗಂಟೆಗಳಲ್ಲಿ 992 ಮಂದಿ ಗುಣಮುಖಿತರಾಗಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಒಟ್ಟಾರೆಯಾಗಿ ರಾಜ್ಯದಲ್ಲಿ 9,59,338ಕ್ಕೆ ಏರಿಕೆಯಾಗಿದ್ದು, ಗುಣಮುಖಿತರ ಸಂಖ್ಯೆ 9,38,890ಕ್ಕೆ ತಲುಪಿದೆ. ಇದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ 8042ರಲ್ಲಿ ಸ್ಥಿರವಾಗಿದೆ.
ಪ್ರಕರಣಗಳ ಜಿಲ್ಲಾವಾರು ಅಂಕಿ ಅಂಶ:-
ಬೆಂಗಳೂರು ನಗರ 630,ಧಾರವಾಡ 10,ಕಲಬುರ್ಗಿ 35,ಬಾಗಲಕೋಟೆ 02, ಬಳ್ಳಾರಿ 4, ಬೆಳಗಾವಿ 9, ಬೆಂಗಳೂರು ಗ್ರಾಮಾಂತರ 13, ಬೀದರ್ 15, ಚಿಕ್ಕಬಳ್ಳಾಪುರ 4, ಚಿಕ್ಕಮಗಳೂರು 1, ಚಿತ್ರದುರ್ಗ 4, ದಕ್ಷಿಣ ಕನ್ನಡ 43, ದಾವಣಗೆರೆ 5, ಗದಗ 4, ಹಾಸನ 11,ಕೋಲಾರ 3, ಮಂಡ್ಯ 3, ಮೈಸೂರು 47, ರಾಯಚೂರು 1, ಶಿವಮೊಗ್ಗ 7, ತುಮಕೂರು 38, ಉಡುಪಿ 13, ಉತ್ತರ ಕನ್ನಡ 5, ವಿಜಯಪುರ 8, ಯಾದಗಿರಿಯಲ್ಲಿ 1 ,ಕೊಡಗು 5 ಪ್ರಕರಣ ಪತ್ತೆಯಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.