ರಾಜ್ಯದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಳ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು : ‘ರಾಜ್ಯದಲ್ಲಿ ಸಾವಿರಾರು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ.2021 ರ ಜನವರಿ ಅಂತ್ಯಕ್ಕೆ ರಾಜ್ಯದಲ್ಲಿ ಒಟ್ಟು 8227 ಮಕ್ಕಳು ಪೌಷ್ಠಿಕ ಆಹಾರವಿಲ್ಲದೆ ಬಳಲುತ್ತಿದ್ದಾರೆ ಎಂದು ವರದಿಯಾಗಿದೆ’ ಎಂದು ರಾಜ್ಯ ಸರಕಾರವೇ ಅಧಿಕೃತ ಮಾಹಿತಿ ನೀಡಿದೆ.

ಕೊಪ್ಪಳ,ಬೆಳಗಾವಿ,ರಾಯಚೂರು,ಬಳ್ಳಾರಿ,ಕಲಬುರಗಿ ಜಿಲ್ಲೆಗಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಿದೆ ಎಂದು ಮಕ್ಕಳ ಅಭಿವೃದ್ಧಿ ಇಲಾಖೆ ಮಾಹಿತಿ ಸ್ಪಷ್ಟಪಡಿಸಿದೆ.

ರಾಜ್ಯಸರಕಾರವು ಇದನ್ನು ಗಂಭೀರವಾಗಿ ಪರಿಗಣಿಸಿ ಮಕ್ಕಳ ಸುರಕ್ಷತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಜಿಲ್ಲಾವಾರು ಸಂಖ್ಯೆ :-

ಬೆಳಗಾವಿ- 853, ಕೊಪ್ಪಳ – 816, ಕಲಬುರಗಿ- 601, ಬಳ್ಳಾರಿ- 857, ಬೆಂಗಳೂರು ನಗರ- 109, ಚಾಮರಾಜನಗರ – 85, ಗದಗ- 256, ಉಡುಪಿ- 51, ಬೆಂಗಳೂರು ಗ್ರಾಮಾಂತರ- 22, ರಾಮನಗರ- 146, ಚಿಕ್ಕಬಳ್ಳಾಪುರ-100, ಕೋಲಾರ – 95, ತುಮಕೂರು- 158, ಮೈಸೂರು- 134, ಮಂಡ್ಯ- 160, ಕೊಡಗು- 110, ಹಾಸನ- 101, ಶಿವಮೊಗ್ಗ- 299, ಚಿತ್ರದುರ್ಗ- 243, ದಾವಣಗೆರೆ- 226, ಚಿಕ್ಕಮಗಳೂರು- 189, ದಕ್ಷಿಣ ಕನ್ನಡ- 47, ಧಾರವಾಡ- 118, ಹಾವೇರಿ- 640, ವಿಜಯಪುರ- 317, ಉತ್ತರ ಕನ್ನಡ- 210, ಯಾದಗಿರಿ- 378, ಬೀದರ್‌-55 ಮಕ್ಕಳು ಸೂಕ್ತ ಪೌಷ್ಟಿಕತೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು