ರಾಜ್ಯದಲ್ಲಿ ಇಂದಿನಿಂದ ಮೇ 4ರ ವರೆಗೆ ನೈಟ್ ಕರ್ಫ್ಯೂ , ವಿಕೇಂಡ್ ಲಾಕ್ ಡೌನ್ : ರಾಜ್ಯ ಸರ್ಕಾರ ಆದೇಶ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ರಾಜ್ಯದಲ್ಲಿ ಎರಡನೇ ಅಲೆ ಹಿನ್ನೆಲೆಯಲ್ಲಿ ಪ್ರತಿದಿನ ಸಾವಿರಾರು ಸೋಂಕು ಪ್ರಕರಣಗಳು ಪತ್ತೆಯಾಗುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಸರ್ಕಾರ ಲಾಕ್​ಡೌನ್​ ಬೇಕೇ ಅಥವಾ ನೈಟ್ ಕರ್ಫ್ಯೂ ಮಾಡುಬೇಕೇ ಎನ್ನುವ ಗೊಂದಲಕ್ಕೆ ಅಂತೂ ತೆರೆ ಬಿದ್ದಿದೆ. ನಿನ್ನೆ ರಾಜ್ಯಪಾಲರ ನೇತೃತ್ವದಲ್ಲಿ ನಡೆದ ಸರ್ವಪಕ್ಷ ಸಭೆ ನಂತರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿ ಆದೇಶ ಹೊರಡಿಸಿದ ಸರ್ಕಾರ, ರಾಜ್ಯಾದ್ಯಂತ ಸಂಪೂರ್ಣವಾಗಿ ಲಾಕ್​ಡೌನ್​ ಮಾಡದೇ ಬರೀ ‘ವೀಕೆಂಡ್​ ಲಾಕ್​ಡೌನ್​’ ಹಾಗೂ ‘ನೈಟ್ ಕರ್ಫ್ಯೂ’ ಮಾಡುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ. ಅದರ ಜತೆಗೆ ಮುಂದಿನ 14 ದಿನಗಳಿಗೆ ಕಠಿಣ ಕ್ರಮಗಳ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ.

ರಾಜ್ಯಾದ್ಯಂತ ಇಂದಿನಿಂದ (ಬುಧವಾರ) ರಾತ್ರಿ 9ರಿಂದ ಬೆಳಗ್ಗೆ 6ವರೆಗೆ (ಏಪ್ರಿಲ್​ 21ರಿಂದ ಮೇ 4ರವರೆಗೆ) ನೈಟ್​ ಕರ್ಫ್ಯೂ ಜಾರಿಯಲ್ಲಿರಲಿದೆ. ಶುಕ್ರವಾರ ರಾತ್ರಿ 9ರಿಂದ ಸೋಮವಾರ ಬೆಳಗ್ಗೆ 6 ಗಂಟೆಯವರೆಗೆ ಅಂದರೆ ಶನಿವಾರ ಮತ್ತು ರವಿವಾರ ಇಡೀ ದಿನ ಲಾಕ್ ಡೌನ್ ಜಾರಿಯಲ್ಲಿರುತ್ತದೆ.

ಸರ್ಕಾರದ ಮಾರ್ಗಸೂಚಿಯ ಪ್ರಕಾರ ವಿಕೇಂಡ್ ಕರ್ಫ್ಯೂ ಯಲ್ಲಿ ಏನಿರುತ್ತೆ?ಏನಿರಲ್ಲ? ಎನ್ನುವ ಪಟ್ಟಿ ಇಲ್ಲಿದೆ:

ಏನೇನು ಇರುವುದಿಲ್ಲ:

◆ ಶಾಲೆ, ಕಾಲೇಜುಗಳು ಸಂಪೂರ್ಣವಾಗಿ ಬಂದ್, ಆನ್​ಲೈನ್​ ತರಗತಿಗೆ ಮಾತ್ರವೇ ಅವಕಾಶ
◆ ಸಿನಿಮಾ ಹಾಲ್​ಗಳು, ಶಾಪಿಂಗ್​ ಮಾಲ್​ಗಳು, ಜಿಮ್​, ಯೋಗಾ ಸೆಂಟರ್​, ಸ್ವಿಮ್ಮಿಂಗ್​ ಪೂಲ್​, ಸ್ಪೋರ್ಟ್ಸ್​ ಕಾಂಪ್ಲೆಕ್ಸ್​, ಸ್ಪಾ, ಬಾರ್​, ಆಡಿಟೋರಿಯಂನಂತಹ ಸ್ಥಳಗಳು ಮುಚ್ಚಲಾಗುವುದು
◆ ಸ್ವಿಮ್ಮಿಂಗ್​ ಫೆಡರೇಷನ್​ ಆಫ್​ ಇಂಡಿಯಾದಿಂದ ಅನುಮತಿ ಪಡೆದ ಸ್ವಿಮ್ಮಿಂಗ್​ ಫೂಲ್​ಗಳನ್ನು ಮಾತ್ರ ತೆರೆಯಲು ಅನುಮತಿ
◆ ಸಾರ್ವಜನಿಕ, ರಾಜಕೀಯ ಸೇರಿ ಎಲ್ಲ ಕಾರ್ಯಕ್ರಮಗಳಿಗೆ ನಿರ್ಬಂಧ
◆ ದೇವಸ್ಥಾನ ಸೇರಿ ಎಲ್ಲ ಧಾರ್ಮಿಕ ಸ್ಥಳಗಳನ್ನು ಮುಚ್ಚಲಾಗುವುದು
◆ ಹೋಟೆಲ್​ ಮತ್ತು ರೆಸ್ಟೋರೆಂಟ್​ಗಳು ಬಂದ್, ಪಾರ್ಸೆಲ್​ ಮಾತ್ರಕ್ಕೆ ಅವಕಾಶ

ಏನೇನು ಇರುತ್ತವೆ:

◆ ಕಟ್ಟಡ ನಿರ್ಮಾಣ ಕಾಮಗಾರಿಗೆ ಅನುಮತಿ
◆ ಕಾರ್ಖಾನೆಗಳಲ್ಲಿ ಕೆಲಸ ನಡೆಸಲು ಅನುಮತಿ
◆ ಆಹಾರ ಸಂಬಂಧಿ ಅಂಗಡಿಗಳು, ದಿನಸಿ ಅಂಗಡಿ, ಹಣ್ಣು ತರಕಾರಿ ಅಂಗಡಿ, ಡೇರಿ, ಮಿಲ್ಕ್​ ಬೂತ್​, ಮೀನು ಮಾಂಸದ ಅಂಗಡಿ ತೆರೆಯಲು ಅನುಮತಿ
◆ ಲಾಡ್ಜ್​ಗಳನ್ನು ತೆರೆದಿಡಲು ಅನುಮತಿ
◆ ಬಾರ್​, ಎಂಆರ್​ಪಿಗಳಲ್ಲಿ ಪಾರ್ಸಲ್​ ನೀಡಲು ಮಾತ್ರ ಅವಕಾಶ
◆ ಬ್ಯಾಂಕ್​, ಇನ್ಶೂರೆನ್ಸ್​ ಸಂಸ್ಥೆ, ಮಾಧ್ಯಮಕ್ಕೆ ಅನುಮತಿ
◆ ಇ – ಕಾಮರ್ಸ್​ ವೇದಿಕೆಯಲ್ಲಿ ಡೆಲಿವರಿ ಮಾಡಲು ಅನುಮತಿ
◆ ಐಟಿ ಸಂಸ್ಥೆಗಳ ಅಗತ್ಯ ಸಿಬ್ಬಂದಿ ಹೊರೆತುಪಡಿಸಿ ಬೇರೆಲ್ಲ ಸಿಬ್ಬಂದಿಗೆ ವರ್ಕ್​ ಫ್ರಂ ಹೋಂ
◆ ಖಾಸಗಿ ಸಂಸ್ಥೆಗಳಲ್ಲಿ ಕಡಿಮೆ ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಲು ಅವಕಾಶ
◆ ಸರ್ಕಾರಿ ಕಚೇರಿಗಳಲ್ಲಿ ಶೇ. 50 ಸಿಬ್ಬಂದಿ ಕೆಲಸಕ್ಕೆ ಅನುಮತಿ
◆ ಜಿಲ್ಲೆಗಳ ನಡುವೆ ಮತ್ತು ರಾಜ್ಯಗಳ ನಡುವೆ ಸಂಚಾರಕ್ಕೆ ಯಾವುದೇ ನಿರ್ಬಂಧವಿಲ್ಲ
ಜಿಲ್ಲೆಗಳ ನಡುವೆ ಮತ್ತು ರಾಜ್ಯಗಳ ನಡುವೆ ಸಂಚಾರಕ್ಕೆ ಯಾವುದೇ ನಿರ್ಬಂಧವಿಲ್ಲ
◆ ಮೆಟ್ರೋ, ಕೆಎಸ್​ಆರ್​ಟಿಸಿ, ಬಿಎಂಟಿಸಿ ಸೇರಿ ಎಲ್ಲ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಅನುಮತಿ
◆ ಮದುವೆಗಳಲ್ಲಿ ಕೇವಲ 50 ಜನರಿಗೆ ಅವಕಾಶ
◆ ಅಂತ್ಯಕ್ರಿಯೆಗಳಲ್ಲಿ ಕೇವಲ 20 ಜನರಿಗೆ ಅವಕಾಶ

ಇಂದು ರಾತ್ರಿ 9ರಿಂದ ಮೇ 4ರ ವರೆಗೆ ಈ ಮೇಲಿನ ಮಾರ್ಗಸೂಚಿ ಜಾರಿಯಲ್ಲಿರುತ್ತದೆ, ನಿಯಮಗಳನ್ನು ಉಲ್ಲಂಘನೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು, ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು ಎಂದು ಸರ್ಕಾರದ ಮುಖ್ಯಕಾರ್ಯದರ್ಶಿ ಪಿ.ರವಿಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು