ರಾಜ್ಯದಲ್ಲಿ ಕೊರೊನಾ ಪರಿಸ್ಥಿತಿ ಕೈಮೀರುವ ಮೊದಲು ತಜ್ಞರ ಹಾಗೂ ಸರ್ವಪಕ್ಷ ಸಭೆ ನಡೆಸಿ : ಕಾಂಗ್ರೆಸ್ ಒತ್ತಾಯ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ರಾಜ್ಯದಲ್ಲಿ ಕರೋನಾ ಸೋಂಕು ನಿರ್ವಹಿಸುವಲ್ಲಿ ರಾಜ್ಯ ಬಿಜೆಪಿ ಸರ್ಕಾರದ ಧೋರಣೆ ನೋಡುತ್ತಿದ್ದರೆ “ಗುಜರಾತ್ ಮಾಡೆಲ್”ನಂತೆ ಆಗುವುದರಲ್ಲಿ ಅನುಮಾನವಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ.

ಕೋವಿಡ್ ಎರಡನೇ ಅಲೆಯಿಂದ ಕೊರೊನಾ ಸೋಂಕು ಏರಿಕೆಯಾಗುತ್ತಿದ್ದು, ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಳ್ಳದೇ ಇರುವುದರಿಂದ ಜನಜೀವನ ಸಂಪೂರ್ಣ ತತ್ತರಿಸಿ ಹೋಗಿದೆ ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿದೆ.

“ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವ ಶ್ರೀರಾಮುಲು, ಡಾ.ಸುಧಾಕರ್ ಅವರೇ, ಕರೋನಾ ಸೋಂಕು ದಿನದಿನಕ್ಕೂ ವಿಷಮ ಸ್ಥಿತಿ ನಿರ್ಮಿಸುತ್ತಿದೆ, ತಾವುಗಳಿನ್ನೂ ಮೈಮರೆತು ಕುಳಿತಿದ್ದೀರಿ. ಬೂಟಾಟಿಕೆಯ ಮಾತುಗಳನ್ನು ಬಿಟ್ಟು ಗಂಭೀರವಾಗಿ ಯೋಚನೆ, ಯೋಜನೆಗಳನ್ನು ಮಾಡದೇ ಹೋದಲ್ಲಿ ಪರಿಸ್ಥಿತಿ ಕೈಮೀರಿ ಹೋಗಲಿದೆ. ಜನ ಹಾದಿ ಬೀದಿಗಳಲ್ಲಿ ಪ್ರಾಣಬಿಡುವ ಸ್ಥಿತಿ ನಿರ್ಮಿಸಬೇಡಿ” ಎಂದು ಕಾಂಗ್ರೆಸ್ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.

ರಾಜ್ಯದಲ್ಲಿ ಕರೋನಾ ಸೋಂಕು ನಿರ್ವಹಿಸುವಲ್ಲಿ ರಾಜ್ಯ ಬಿಜೆಪಿ ಸರ್ಕಾರದ ಧೋರಣೆ ನೋಡುತ್ತಿದ್ದರೆ “ಗುಜರಾತ್ ಮಾಡೆಲ್”ನಂತೆ ಆಗುವುದರಲ್ಲಿ ಅನುಮಾನವಿಲ್ಲ. ಮುಖ್ಯಮಂತ್ರಿಗಳೇ ಪರಿಸ್ಥಿತಿ ಕೈಮೀರುವ ಮೊದಲು ತಜ್ಞರ ಹಾಗೂ ಸರ್ವಪಕ್ಷ ಸಭೆ ಕರೆದು ಕೂಡಲೇ ಕಾರ್ಯೋನ್ಮುಖರಾಗಿ. ತಡಮಾಡಿದರೆ ಮುಂದಿನ ಪರಿಣಾಮಗಳು ಭೀಕರವಾಗಿರಲಿದೆ ಎಂದು ಕಾಂಗ್ರೆಸ್ ಸರ್ಕಾರಕ್ಕೆ ಒತ್ತಾಯಿಸಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು