ರಾಜ್ಯದ ಎಂಟು ನಗರಗಳಲ್ಲಿ ಇಂದು ರಾತ್ರಿ ಹತ್ತರಿಂದ ಕೊರೊನಾ ಕರ್ಫ್ಯೂ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಎರಡನೆಯ ಅಲೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಇಂದಿನಿಂದ ರಾತ್ರಿ ಕೊರೊನಾ(ನೈಟ್) ಕರ್ಫ್ಯೂ ಜಾರಿಯಾಗಲಿದೆ. ಬೆಂಗಳೂರು, ಮೈಸೂರು, ಬೀದರ್ ಸೇರಿ ರಾಜ್ಯದ 8 ನಗರಗಳಲ್ಲಿ ಕೊರೋನಾಗೆ ಕಡಿವಾಣ ಹಾಕಲು ನಿರ್ಬಂಧ ಹೇರಲಾಗಿದೆ.

ದಿನದಿಂದ ದಿನಕ್ಕೆ ಕೊರೊನಾ ಪ್ರಕರಣ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ರಾಜ್ಯದ 8 ನಗರದಲ್ಲಿ ಅತಿ ಹೆಚ್ಚು ಕೊರೊನಾ ಸೋಂಕು ಉಲ್ಬಣಗೊಂಡಿದೆ. ಅದನ್ನು ಕಡಿವಾಣ ಹಾಕಲು ಸರ್ಕಾರ ನೈಟ್ ಕರ್ಫ್ಯೂ ಜಾರಿಗೊಳಿಸಿದೆ.

ಬೈಕ್ ಸವಾರರು, ಸೇರಿದಂತೆ ಯಾವುದೇ ವಾಹನಗಳು ರಾತ್ರಿ ಹತ್ತರ ನಂತರ ರೋಡಿಗಿಳಿಯಬಾರದು. ತುರ್ತು ಸೇವೆ, ವೈದ್ಯಕೀಯ ಸೇವೆಗಳು ಹೊರತು ಪಡಿಸಿ ಅನಗತ್ಯ ತಿರುಗಾಟಕ್ಕೆ ಬ್ರೇಕ್ ಬೀಳಲಿದೆ. ಈಗಾಗಲೇ ಎಲ್ಲಾ ತಯಾರಿ ಆಗಿದೆ. ರೂಲ್ಸ್ ಉಲ್ಲಂಘನೆ ಮಾಡಿದವರಿಗೆ ಬಿಸಿ ತಟ್ಟುವ ಸಾಧ್ಯತೆ ಇದೆ.

ವೈದ್ಯಕೀಯ ಸೇವೆ, ತುರ್ತು ಸೇವಾ ಚಟುವಟಿಕೆಗಳಿಗೆ ಮಾತ್ರ ಅವಕಾಶ ಇರುತ್ತದೆ. ಜೊತೆಗೆ ಬಸ್, ರೈಲು, ವಿಮಾನ ಪ್ರಯಾಣ, ಕ್ಯಾಬ್ ಗಳು, ಹೂವು, ಹಣ್ಣು, ತರಕಾರಿ ಅಗತ್ಯ ವಸ್ತುಗಳನ್ನು ಸಾಗಿಸುವ ವಾಹನಗಳು ಸಂಚರಿಸಲಿವೆ. ಇ-ಕಾಮರ್ಸ್ ವಾಹನಗಳು, ಫುಡ್ ಹೋಮ್ ಡೆಲಿವರಿಗೆ ಅನುಮತಿ ನೀಡಲಾಗಿದೆ.

ರಾತ್ರಿ ವೇಳೆಯಲ್ಲಿ ಕೆಲಸ ನಿರ್ವಹಿಸುವವರು ರಾತ್ರಿ 10 ಗಂಟೆಯ ಮುಂಚೆ ಕಚೇರಿ ತಲುಪಬೇಕು. ಬೆಳಗ್ಗೆ 5 ಗಂಟೆಯ ನಂತರ ಹೊರಗೆ ಬರಬೇಕು. ಆಸ್ಪತ್ರೆಗೆ ಹೋಗುವವರು, ರೋಗಿಗಳ ಆರೈಕೆಗೆ ತೆರಳುವವರು ಸೂಕ್ತ ದಾಖಲೆ ತೋರಿಸಬೇಕು. ಕಂಪನಿ, ಕಾರ್ಖಾನೆಗಳ ನೌಕರರು 10 ಗಂಟೆಯೊಳಗೆ ಮನೆ ಸೇರಬೇಕು. ಹೋಟೆಲ್, ರೆಸ್ಟೋರೆಂಟ್ ಗ್ರಾಹಕರು 10 ಗಂಟೆಯೊಳಗೆ ಮನೆ ಸೇರಿಕೊಳ್ಳಬೇಕು. ನೈಟ್ ಕರ್ಫ್ಯೂ ಸಂದರ್ಭದಲ್ಲಿ ಸಾರ್ವಜನಿಕರಿಗೆ ಯಾವುದೇ ಪಾಸ್ ವಿತರಣೆ ಮಾಡುವುದಿಲ್ಲ. ತುರ್ತು ಕಾರ್ಯಗಳಿಗಾಗಿ ಓಡಾಡುವವರು ಗುರುತಿನ ಚೀಟಿ ತೋರಿಸಬೇಕಿದೆ.

ವೈದ್ಯಕೀಯ ಸೇವೆ ಮತ್ತು ತುರ್ತು ಚಟುವಟಿಕೆಗೆ ಮಾತ್ರ ಅನುಮತಿ ನೀಡಲಾಗಿದ್ದು, ಉಳಿದಂತೆ ಎಲ್ಲಾ ವಾಣಿಜ್ಯ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗಿದೆ. ಅನಗತ್ಯವಾಗಿ ತಿರುಗಾಡುವವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು. ಆರೋಗ್ಯ ಸಚಿವರು ನೈಟ್ ಕರ್ಫ್ಯೂ ಮಾರ್ಗಸೂಚಿ ಬಿಡುಗಡೆಗೊಳಿಸಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು