ರಾಜ್ಯದ ಕೋವಿಡ್ ಲಾಕ್ಡೌನ್ ಮಾರ್ಗಸೂಚಿಯಲ್ಲಿ ಮಹತ್ವದ ಬದಲಾವಣೆ | ವಾರದ ಸಂತೆ ಬಂದ್ ; ದಿನಸಿ ಅಂಗಡಿ, ತಳ್ಳುಗಾಡಿಗಳ ಸಮಯಮಿತಿಯಲ್ಲಿ ಏರಿಕೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ಇಂದು ರಾಜ್ಯ ಸರಕಾರವು ಕೋವಿಡ್ ಲಾಕ್ಡೌನ್ ಮಾರ್ಗಸೂಚಿಯಲ್ಲಿ ಮತ್ತೆ ಬದಲಾವಣೆ ತಂದಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಉಂಟಾಗುತ್ತಿರುವ ನೂಕು ನುಗ್ಗಲು ಮತ್ತು ರೈತರ ಬೆಳೆಗಳು ಹಾಳಾಗುತ್ತಿರುವ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ.

ಅದರಂತೆ ವಾರದ ಸಂತೆ ಮಾರುಕಟ್ಟೆಗಳು ಸಂಪೂರ್ಣವಾಗಿ ಬಂದ್ ಆಗಲಿದೆ. ಆದರೆ ಎಪಿಎಮ್‍ಸಿ , ದಿನಸಿ ಅಂಗಡಿಗಳು ತೆರೆಯುವ ಸಮಯ ಬೆಳಿಗ್ಗೆ ಆರರಿಂದ ಹನ್ನೆರಡರ ವರೆಗೆ ನಿಗದಿಪಡಿಸಲಾಗಿದೆ.

ಹಾಪ್ ಕಾಮ್ಸ್, ಹಾಲಿನ ಬೂತುಗಳು, ಹಣ್ಣು, ತರಕಾರಿಗಳನ್ನು ಮಾರುವ ತಳ್ಳುಗಾಡಿಗಳಿಗೆ ಬೆಳಿಗ್ಗೆ ಆರುಗಂಟೆಯಿಂದ ಸಂಜೆ ಆರು ಗಂಟೆಯ ವರೆಗೆ ಸಮಯಮಿತಿ ಕೊಡಲಾಗಿದೆ. ಕೋವಿಡ್ ಸಂದರ್ಭವನ್ನು ದುರುಪಯೋಗಪಡಿಸಿ ದುಬಾರಿ ಬೆಲೆಗೆ ಮಾರುವಂತಿಲ್ಲ. ಮಾರುಕಟ್ಟೆಯ ಅದೇ ಬೆಲೆಗೆ ಮಾರುವಂತೆ ಮಾರ್ಗಸೂಚಿಯಲ್ಲಿ ವಿವರಿಸಲಾಗಿದೆ.

ಎಲ್ಲಾ ಮಾರ್ಗಸೂಚಿಗಳು ರಾಜ್ಯಾದ್ಯಂತ ನಾಳೆಯಿಂದಲೇ(ಮೇ 2) ಜಾರಿಗೆ ಬರಲಿದ್ದು, ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವಂತೆ ಪೋಲೀಸರಿಗೆ ಆದೇಶಿಸಲಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು