ರಾಜ್ಯದ 25 ಬಿಜೆಪಿ ಸಂಸದರು ಬದುಕಿದ್ದಾರೆಯೇ ಅಥವಾ ಸತ್ತಿದ್ದಾರೆಯೇ: ಪ್ರಿಯಾಂಕ್ ಖರ್ಗೆ ಆಕ್ರೋಶ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಕಲಬುರ್ಗಿ: ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಜನರು ಸಾಯುತ್ತಿದ್ದಾರೆ. ಆಕ್ಸಿಜನ್, ಲಸಿಕೆ ಇಲ್ಲದೇ ಪರದಾಡುತ್ತಿದ್ದಾರೆ ಇಂತಹ ಸ್ಥಿತಿ ಎದುರಾದರೂ ಬಿಜೆಪಿ ಸಂಸದರು ಕೇಂದ್ರದ ವಿರುದ್ಧ ಧ್ವನಿ ಎತ್ತದೇ ಮೌನವಾಗಿ ಕುಳಿತಿದ್ದಾರೆ. ರಾಜ್ಯದ 25 ಬಿಜೆಪಿ ಸಂಸದರು ಬದುಕಿದ್ದಾರೆಯೇ ಅಥವಾ ಸತ್ತಿದ್ದಾರೆಯೇ ಎಂದು ಕೆಪಿಸಿಸಿ ವಕ್ತಾರ, ಶಾಸಕ ಪ್ರಿಯಾಂಕಾ ಖರ್ಗೆ ಕಿಡಿಕಾರಿದ್ದಾರೆ.

ರಾಜ್ಯ ಸರ್ಕಾರದ ಬೇಜವಾಬ್ದಾರಿತನ, ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಹಾಗೂ ಜಿಲ್ಲೆಯ ಸದ್ಯದ‌ ಕೋವಿಡ್ ಪರಿಸ್ಥಿತಿಯ ಕುರಿತು‌ ಇಂದು ಕಲಬುರಗಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಸಾವು ನೋವು ಸಂಭವಿಸುತ್ತಿವೆ, ಜನ ಆಕ್ಸಿಜನ್, ಬೆಡ್ , ಇಲ್ಲದೆ ಪರದಾಟ ನಡೆಸುತ್ತಿದ್ದಾರೆ, ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಜನರ ಪರ ಧ್ವನಿ ಎತ್ತದವರು ಇನ್ನ್ಯಾವಾಗ ಎತ್ತುತ್ತಾರೆ.
ಕಲಬುರಗಿ ಜಿಲ್ಲೆಯು ಸೇರಿದಂತೆ ಇಡೀ ರಾಜ್ಯದಲ್ಲಿ ಆಕ್ಸಿಜನ್, ರೆಮಿಡಿಸಿವರ್, ಬೆಡ್‌ಗಳ ಕೊರತೆ ಉಂಟಾಗಿದ್ದರೂ, ರಾಜ್ಯ ಸರ್ಕಾರ ದಿವ್ಯ ನಿರ್ಲಕ್ಷ್ಯ ತಾಳಿದೆ. ಕೊರೋನಾ ವಿಚಾರದಲ್ಲಿ ಕೇಂದ್ರದಿಂದ ಪದೇ ಪದೇ ರಾಜ್ಯಕ್ಕೆ ಮೋಸವಾಗುತ್ತಿದ್ದರೂ, 25 ಬಿಜೆಪಿ ಸಂಸದರು ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿದ್ದಾರೆ.
ಇಂಥವರಿಗೆ ಯಾಕೆ ಆಯ್ಕೆ ಮಾಡಿದ್ದು ಎಂದು ಅವರು ಪ್ರಶ್ನಿಸಿದರು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು